ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾ ಗೌಡ (Pavithra Gowda) ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಹಲವರು ಮಾಡುತ್ತಿರುವ ಕಾಮೆಂಟ್‌ಗಳಿಗೆ ಮಗಳು ಖುಷಿ ಗೌಡ ಬೇಸರ ವ್ಯಕ್ತಪಡಿಸಿದ್ದಾರೆ. ಅಮ್ಮನನ್ನು ನೆನೆದು ಮಗಳು ಪೋಸ್ಟ್ ಮಾಡಿದ್ದಾಳೆ.
ಕೆಟ್ಟ ಕಾಮೆಂಟ್ಸ್‌ಗಳಿಗೆ ನಾನು ಕೇರ್ ಮಾಡೋದಿಲ್ಲ. ನಾನು ಈ ರೀತಿ ಬರೆಯಬೇಕು ಅಂತ ಎಂದಿಗೂ ಯೋಚಿಸಲಿಲ್ಲ. ಆದರೆ, ನಿಮ್ಮ ಕಟು ಮಾತುಗಳು ಗಾಯ ಮಾಡಿವೆ. ನನ್ನ ತಾಯಿಯ ಬಗ್ಗೆ ಅಶ್ಲೀಲ ಕಾಮೆಂಟ್ಸ್, ಎಷ್ಟು ಅಂತ ದ್ವೇಷ ನನ್ನ ಹೃದಯವನ್ನು ಚುಚ್ಚಿದೆ. ನಿಮಗ್ಯಾರಿಗೂ ಪವಿತ್ರಾ ಗೌಡ ಪರಿಚಯವಿಲ್ಲ. ಅಮ್ಮನ ಹೋರಾಟ, ತ್ಯಾಗಗಳು ನಿಮಗೆ ತಿಳಿದಿಲ್ಲ. ನನ್ನ ಅಮ್ಮ ಮೌನವಾಗಿ ಎದುರಿಸಿದ ಸವಾಲುಗಳು ನನಗೆ ಮಾತ್ರ ಗೊತ್ತು. ತಾಯಿ ನನ್ನ ಜಗತ್ತು, ನನ್ನ ಶಕ್ತಿ, ನನ್ನ ಸ್ಫೂರ್ತಿ ತಂದೆ ಜಾಗವನ್ನು ನನ್ನ ತಾಯಿ ತುಂಬಿಸಿದ್ದಾಳೆ ಎಂದು ನೋವಿನಲ್ಲಿ ಬರೆದುಕೊಂಡಿದ್ದಾಳೆ.
ನಾನು ಇನ್ನು ಚಿಕ್ಕವಳು, ಪ್ರಪಂಚವನ್ನು ಅರ್ಥ ಮಾಡಿಕೊಳ್ಳೋದಕ್ಕೆ ಪ್ರಯತ್ನಿಸುತ್ತಿದ್ದೇನೆ. ಈ ಭಾರವನ್ನು ಹೊರಲು ಅಗಾಧವಾಗಿದೆ. ನನ್ನ ತಾಯಿಗೆ ಯಾರನ್ನೂ ನೋಯಿಸುವ ಉದ್ದೇಶವಿಲ್ಲ. ಯಾರು ಏನೇ ಹೇಳಿದ್ರು ಅಮ್ಮನೇ ನನ್ನ ಹೀರೋ ಎಂದು ನೋವಿನಿಂದ ಪತ್ರದಲ್ಲಿ ತಾಯಿಯನ್ನು ಮಗಳು ನೆನೆದಿದ್ದಾಳೆ.








