ಬೆಳಗಾವಿ: ಪ್ರತಿ ವರ್ಷವೂ ಆಸ್ಪತ್ರೆಗಳಲ್ಲಿ ಬಾಣಂತಿಯರ ಸಾವಿನ ಸಂಖ್ಯೆಗಳು ವರದಿಯಾಗುತ್ತಿರುತ್ತವೆ. ಆದರೆ, ಇದನ್ನು ಬಗೆಹರಿಸಲು ಎಲ್ಲರೂ ಯತ್ನಿಸಬೇಕು. ಇದನ್ನೇ ಮುಂದಿಟ್ಟುಕೊಂಡು ರಾಜಕೀಯ ಮಾಡಬಾರದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಣಂತಿಯರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿವೇಶನದಲ್ಲಿ ಚರ್ಚೆಯಾಗಲಿ. ನಾವು ಅದಕ್ಕೆ ಉತ್ತರ ನೀಡಲು ಸಿದ್ಧ. ಪ್ರತಿಯೊಂದು ಸಾವಿಗೂ ವೈದ್ಯಕೀಯವೇ ಕಾರಣ ಎನ್ನಲು ಆಗುವುದಿಲ್ಲ. ಈ ಸಮಸ್ಯೆಗಳನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದೇವೆ. ಆದರೆ, ನಾವು ಯಾವ ಮಾಫಿಯಾಕ್ಕೂ ಒಳಗಾಗಿಲ್ಲ ಎಂದಿದ್ದಾರೆ.
ಬಿಜೆಪಿಯು ಮೊದಲು ಕೋವಿಡ್ ನಲ್ಲಾಗಿರುವ ಹಗರಣಕ್ಕೆ ಸಂಬಂಧಿಸಿದಂತೆ ಉತ್ತರ ನೀಡಲಿ. ಆನಂತರ ನಮ್ಮ ವಿರುದ್ಧ ಆರೋಪ ಮಾಡಲಿ. ಎಲ್ಲ ವಿಷಯಗಳನ್ನು ಕೂಡ ನಾವು ಚರ್ಚೆ ಮಾಡುತ್ತೇವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಹಾಗೂ ಸಿಬ್ಬಂದಿ ಕೊರತೆ ಇದೆ. ಮುಂದಿನ ದಿನಗಳಲ್ಲಿ ನೇಮಕಾತಿಗಳನ್ನು ಮಾಡಲಾಗುವುದು ಎಂದಿದ್ದಾರೆ.






