ಮುಂಬಯಿ: ಮಹಾರಾಷ್ಟ್ರ ಚುನಾವಣೆಗೆ ಭರ್ಜರಿ ತಾಲೀಮು ನಡೆದಿದ್ದು, ಈ ಮಧ್ಯೆ ತನ್ನ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಲು ಕಾಂಗ್ರೆಸ್ ಮುಂದಾಗಿದೆ.
ನಾಮಪತ್ರ ಸಲ್ಲಿಸಲು ಬಯಸುವ ಎಲ್ಲಾ ಅಭ್ಯರ್ಥಿಗಳ ಸಂದರ್ಶನವನ್ನು ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ. 288 ವಿಧಾನಸಭಾ ಸ್ಥಾನಗಳಿಗೆ 1,688 ಅಭ್ಯರ್ಥಿಗಳು ಈಗಾಗಲೇ ಆಸಕ್ತಿ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಅಭ್ಯರ್ಥಿಗಳಿಗೆ ಅ. 1ರಿಂದ 8ರ ವರೆಗೆ ಕಾಂಗ್ರೆಸ್ ನಿಂದ ಸಂದರ್ಶನ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ.
ಟಿಕೆಟ್ ಹಂಚಿಕೆಗೂ ಮುನ್ನ ಎಲ್ಲಾ ಆಸಕ್ತ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಒಳಪಡಿಸಲು ಪಕ್ಷ ನಿರ್ಧರಿಸಿದೆ. ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಸದಸ್ಯ ಪಕ್ಷ ಆಗಿದೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಮತ್ತು ಶರದ್ ಪವಾರ್ ನೇತೃತ್ವದ ಎನ್ಸಿಪಿ ಬಣದ ಮೈತ್ರಿಯೊಂದಿಗೆ ಚುನಾವಣೆ ಎದುರಿಸಲು ಕಾಂಗ್ರೆಸ್ ಮುಂದಾಗಿದೆ. ಯನ್ನು ಎದುರಿಸಲಿದೆ.
ಸಂದರ್ಶನಕ್ಕಾಗಿ 6 ತಂಡಗಳನ್ನು ರಚಿಸಿದೆ. ಪೃಥ್ವಿರಾಜ್ ಚೌಹಾಣ್, ನಸೀಮ್ ಖಾನ್, ಸಂಸದ ಚಂದ್ರಕಾಂತ್ ಹಂದೋರೆ, ಪ್ರಣಿತಿ ಶಿಂಧೆ, ಸತೇಜ್ ಪಾಟೀಲ್, ಅಮಿತ್ ದೇಶಮುಖ್, ನಿತಿನ್ ರಾವುತ್ ಮತ್ತು ಯಶೋಮತಿ ಠಾಕೂರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರನ್ನು ಸಂದರ್ಶನ ನಡೆಸುವ ತಂಡಗಳ ಭಾಗವಾಗಿ ನೇಮಿಸಲಾಗಿದೆ.