ದಸರಾ ಸಭೆಯ ಪಾವಿತ್ರ್ಯತೆ ಹಾಳಾಗಿದ್ದು, ಅದು ಕೇವಲ ರಾಜಕೀಯ ನಾಯಕರ ವೇದಿಕೆಯಾಗಿತ್ತು ಎಂದು ಮೈಸೂರಿನಲ್ಲಿ ವಿಪ ಸದಸ್ಯ ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ಉದ್ಘಾಟಕರು ಕೂಡ ರಾಜಕೀಯ ಭಾಷಣ ಮಾಡಿದರು. ಇಡೀ ಕಾರ್ಯಕ್ರಮ ಹಾಳಾಗಿ ಹೋಯಿತು. ಇನ್ನೆಂದೂ ದಸರಾ ಉದ್ಘಾಟನೆ ಕಾರ್ಯಕ್ರಮ ಬೇಡ ಅನಿಸಿದೆ. ಆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ನಾನು ತಪ್ಪೇ ಮಾಡಿಲ್ಲ ಅಂತಾ ಹೇಳಿದ್ರು. ಜಿಟಿ ದೇವೇಗೌಡ ಭಾಷಣದಲ್ಲಿನ ಪರಾಕ್ರಮ ನೋಡಿದ್ರೆ ಜಿ.ಟಿ. ದೇವೇಗೌಡ ಮುಡಾ ಫಲನುಭಾವಿ ಇರಬೇಕು. ಇಡೀ ಕಾರ್ಯಕ್ರಮವನ್ನು ಜಿ.ಟಿ. ದೇವೇಗೌಡ ಹಾಳು ಮಾಡಿದ ಎಂದಿದ್ದಾರೆ.
ಇಡೀ ದಸರಾ ಕಾರ್ಯಕ್ರಮ ವನ್ನು ರಾಜಕೀಯ ನುಂಗಿದೆ. ಸರ್ಕಾರ ಬೀಳಿಸುವ ಮಾತು ಯಾರು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದವರೇ ಕುಣಿಯುತ್ತಿರುವುದು. 14 ಸೈಟ್ ರಾಜಭವನ, ಹೈ ಕೋರ್ಟ್, ಲೋಕಾಯುಕ್ತ ಎಲ್ಲವನ್ನೂ ಬಳಸಲಾಗಿದೆ ಎಂದು ಕಿಡಿಕಾರಿದ್ದಾರೆ.