Election results 2022 : ಪಂಜಾಬ್ ನಲ್ಲಿ APP ಕ್ಲೀನ್ ಸ್ವೀಪ್.. 4 ರಾಜ್ಯಗಳಲ್ಲಿ ಕೇಸರಿ ಕಹಳೆ
ಬೆಂಗಳೂರು : ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ್, ಮಣಿಪುರ ವಿಧಾನಸಭಾ ಚುನಾವಣೆ ಮತ ಎಣಿಕೆ ಆರಂಭವಾಗಿದೆ.
ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಮ್ಯಾಜಿಕ್ ನಂಬರ್ ಕ್ರಾಸ್ ಮಾಡಿದೆ.
ಇತ್ತ ಪಂಜಾಬ್ ನಲ್ಲಿ ಆಡಳಿತ ರೂಢ ಕಾಂಗ್ರೆಸ್ ಪಾರ್ಟಿಗೆ ಭಾರಿ ಮುಖಭಂಗವಾಗಿದೆ.
ಆಮ್ ಆದ್ಮಿ ಪಾರ್ಟಿ ಕ್ಲೀನ್ ಸ್ವೀಪ್ ಮಾಡುತ್ತಿದ್ದು, ಬರೋಬ್ಬರಿ 83 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಸದ್ಯದ ಟ್ರೆಂಡ್ ಹೀಗಿದೆ
ಉತ್ತರ ಪ್ರದೇಶದಲ್ಲಿ 403 ಕ್ಷೇತ್ರಗಳ ಪೈಕಿ 264 ಸ್ಥಾನಗಳಲ್ಲಿ ಬಿಜೆಪಿ ಆರಂಭಿಕ ಮುನ್ನಡೆ ಪಡೆದುಕೊಂಡಿದೆ, ಸಮಾಜವಾದಿ ಪಕ್ಷ 105 ಹಾಗೂ ಬಿಎಸ್ ಪಿ 4 ಕಾಂಗ್ರೆಸ್ 4 ಸ್ಥಾನದಲ್ಲಿ ಮುನ್ನಡೆಯಲ್ಲಿದೆ. ಮ್ಯಾಜಿಕ್ ನಂಬರ್ : 202
ಉತ್ತರಾಖಂಡದಲ್ಲಿ ಬಿಜೆಪಿ 44, ಕಾಂಗ್ರೆಸ್ 20 ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿದೆ. ಮ್ಯಾಜಿಕ್ ನಂಬರ್ : 44
ಪಂಜಾಬ್ ನಲ್ಲಿ ಕಾಂಗ್ರೆಸ್ 18, ಎಎಪಿ 83, ಬಿಜೆಪಿ 4 ಕ್ಷೇತ್ರಗಳಲ್ಲಿ ಮುನ್ನಡೆಯಲಿದೆ. ಮ್ಯಾಜಿಕ್ ನಂಬರ್ : 61
ಗೋವಾದಲ್ಲಿ ಬಿಜೆಪಿ 20, ಕಾಂಗ್ರೆಸ್ 13 ಸ್ಥಾನದಲ್ಲಿ ಮುನ್ನಡೆಯಲಿದೆ. ಮ್ಯಾಜಿಕ್ ನಂಬರ್ : 21
ಮಣಿಪುರದಲ್ಲಿ ಬಿಜೆಪಿ 29, ಕಾಂಗ್ರೆಸ್ 14 ಸ್ಥಾನದಲ್ಲಿ ಮುನ್ನಡೆ ಪಡೆದುಕೊಂಡಿವೆ. ಮ್ಯಾಜಿಕ್ ನಂಬರ್ : 31
ಉತ್ತರ ಪ್ರದೇಶದಲ್ಲಿ 403, ಪಂಜಾಬ್ 117, ಉತ್ತರಾಖಂಡ್ 70, ಮಣಿಪುರ 60 ಹಾಗೂ ಗೋವಾದ 40 ಸ್ಥಾನಗಳಲ್ಲಿ ಮತದಾನವಾಗಿದ್ದು, ಇಂದು ಎಲ್ಲ ರಾಜ್ಯಗಳ ಫಲಿತಾಂಶ ಬಹಿರಂಗಗೊಳ್ಳಲಿದೆ.
The election result of the five states