ಏಪ್ರಿಲ್ 14ರ ಮಂಗಳವಾರ ಲಾಕ್ ಡೌನ್ ಮುಕ್ತಾಯವಾಗಲಿದೆ. ಹಾಗಾದ್ರೆ 14ರ ನಂತ್ರ ಮುಂದೇನು..? ಸದ್ಯ ದೇಶದ ಜನರಲ್ಲಿ ಕಾಡುತ್ತಿರುವ ಪ್ರಶ್ನೆ ಇದು.
ಈಗಾಗಲೇ ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಲಾಕ್ ಡೌನ್ ಮುಂದುವರಿಸುವುದಿಲ್ಲ ಎಂದು ಹೇಳಿದೆ. ಆದ್ರೆ ಲಾಕ್ ಡೌನ್ ಮುಗಿದ ಮೇಲೆಯೂ ಕೆಲವು ಷರತ್ತುಗಳನ್ನು ಹಾಕಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಹಾಟ್ ಸ್ಪಾಟ್ಗಳ ಮೇಲೆ ಹದ್ದಿನ ಕಣ್ಣು!
ಲಾಕ್ ಡೌನ್ ಅವಧಿ ಮುಗಿದ ಬಳಿಕ ಸರ್ಕಾರದ ಕಣ್ಣು ಹಾಟ್ ಸ್ಪಾಟ್ಗಳ ಮೇಲೆ ಬೀಳಲಿದೆ. ಹೆಚ್ಚು ಜನ ಸೇರುವ ಪ್ರದೇಶವನ್ನು ಹಾಟ್ ಸ್ಪಾಟ್ ಎಂದು ಸರ್ಕಾರ ಗುರುತಿಸಲಿದೆ. ಹಾಟ್ ಸ್ಪಾಟ್ಗಳಲ್ಲಿ ಹೆಚ್ಚು ಜನ ಸೇರದಂತೆ ಮಾಡಲು ಹಲವು ನಿಯಮ ಘೋಷಣೆ ಮಾಡಲಾಗುತ್ತದೆ. ಈಗ ಲಾಕ್ ಡೌನ್ ಅವಧಿಯಲ್ಲಿ ಹೆಚ್ಚು ಜನ ಸಂದಣಿ ಸೇರುವ ಪ್ರದೇಶಗಳ ಮೇಲೆ ನಿಷೇಧ ಹೇರಲಾಗಿದೆ. ಅದೇ ರೀತಿ ಏಪ್ರಿಲ್ 14ರ ಬಳಿಕವೂ ಹಾಟ್ ಸ್ಪಾಟ್ಗಳ ಮೇಲಿನ ನಿರ್ಬಂಧವನ್ನು ತೆರವುಗೊಳಿಸುವುದಿಲ್ಲ ಎಂದು ಹೇಳಲಾಗುತ್ತಿದೆ.
ಏಪ್ರಿಲ್ 14ರ ನಂತ್ರ ಕ್ವಾರಂಟೈನ್ ಝೋನ್, ಬಫರ್ ಝೋನ್ ಎಂದು ಎರಡು ವಿಭಾಗವನ್ನು ಮಾಡಲು ಸರ್ಕಾರ ಪ್ಲಾನ್ ಮಾಡಿಕೊಂಡಿದೆ. ಝೋನ್ಗಳ ಆಧಾರದ ಮೇಲೆ ವಾಹನಗಳ ಸಂಚಾರ, ಜನ ಸೇರುವುದಕ್ಕೆ ನಿಷೇಧ ಹೇರಲಾಗುತ್ತದೆ. ಅಗತ್ಯ ವಸ್ತುಗಳ ಸಾಗಣೆಗೆ ವಿಶೇಷ ಪಾಸುಗಳನ್ನು ವಿತರಣೆ ಮಾಡಲಾಗುತ್ತದೆ.