ಇತ್ತೀಚೆಗಷ್ಟೇ ನಮ್ಮನ್ನ ಅಗಲಿದ ಸಂಗೀತ ಸಾಮ್ರಾಟ ಎಸ್ ಪಿಬಿ ಅವರ ಅಭಿಮಾನಿಗಳ ಪರವಾಗಿ ಇದೀಗ ವಿಧಾನಪರಿಷತ್ ಸದಸ್ಯ
ಗೋವಿಂದರಾಜು ಹೊಸದೊಂದು ಬೇಡಿಕೆಯಿಟ್ಟಿದ್ದಾರೆ.
ವಿಧಾನಪರಿಷತ್ ಸದಸ್ಯ ಗೋವಿಂದರಾಜು ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
ಬೆಂಗಳೂರಿನ ಯಾವುದಾದರೂ ಸರ್ಕಲ್ ಮತ್ತು ರಸ್ತೆಗೆ ಗಾನಕೋಕೋಗಿಲೆ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಹೆಸರನ್ನು ಇಡಬೇಕೆಂದು ಸಿಎಂ
ಯಡಿಯೂರಪ್ಪನವರಿಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಹಲವು ದಶಕಗಳ ಕಾಲ ನಮ್ಮನ್ನು ರಂಜಿಸಿರುವ ಎಸ್ ಪಿಬಿ ಅವರ ಸಾಧನೆ ಅಪಾರ..
ಹೀಗಾಗಿ ಬೆಂಗಳೂರಿನ ಒಂದು ವೃತ್ತ ಅಥವಾ ರಸ್ತೆಗೆ ಅವರ ಹೆಸರಿಡಬೇಕೆಂದು ಪತ್ರದಲ್ಲಿ ವಿನಂತಿಸಿಕೊಂಡಿದ್ದಾರೆ.