ಈ ವರ್ಷದ ಅಂತ್ಯಕ್ಕೆ ರಷ್ಯಾದಿಂದ ಆಮದು ನಿಲ್ಲಿಸುತ್ತೇವೆ ಎಂದ ಯುರೋಪಿಯನ್ ಒಕ್ಕೂಟ
2022ರ ಅಂತ್ಯದ ವೇಳೆಗೆ ರಷ್ಯಾದಿಂದ ಸಂಪೂರ್ಣವಾಗಿ ತೈಲ ಆಮದನ್ನು ನಿಲ್ಲಿಸುತ್ತೇವೆ ಎಂದು ಯುರೋಪಿಯನ್ ಒಕ್ಕೂಟ ಹೇಳಿದೆ.
ಈ ಕುರಿತು ಯುರೋಪಿಯನ್ ಕಮಿಷನ್ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್ ಮಾತನಾಡಿ “ಯುರೋಪಿಯನ್ ಯೂನಿಯನ್ ರಷ್ಯಾದಿಂದ ಎಲ್ಲಾ ಕಚ್ಚಾ ಮತ್ತು ಸಂಸ್ಕರಿಸಿದ ತೈಲ ಆಮದುಗಳನ್ನು 2022 ರ ಅಂತ್ಯದ ವೇಳೆಗೆ ನಿಲ್ಲಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಯುರೋಪಿನ ದೇಶಗಳು ಖರೀದಿಸಡುವ ಒಟ್ಟು ತೈಲದ ಪಾಲಿನಲ್ಲಿ 25% ರಷ್ಯಾದಿಂದಲೇ ಬರುತ್ತದೆ. ಅದರಲ್ಲೂ ಜರ್ಮನಿ ಮತ್ತು ಸ್ಲೊವಾಕಿಯಾ ದೇಶಗಳು ಹೆಚ್ಚು ರಷ್ಯಾ ತೈಲವನ್ನ ತರಿಸುವುದರಲ್ಲಿ ಮುಂಚೂಣಿಯಲ್ಲಿವೆ. ಜರ್ಮನಿಯು 12% ತೈಲ ತರಿಸಿದರೆ, ಸ್ಲೋವಾಕಿಯಾವು ಬಹುಪಾಲು ಅಂದರೆ 96% ದಷ್ಟು ರಷ್ಯದಿಂದಲೇ ತೈಲವನ್ನೇ ಆಮದು ಮಾಡಿಕೊಳ್ಳುತ್ತದೆ. ತೈಲ ರಪ್ತಿನಿಂದ ರಷ್ಯಾವು ದಿನವೊಂದಕ್ಕೆ 285 ಮಿಲಿಯನ್ ಡಾಲರ್ ಗಳಷ್ಟು ಹಣ ಗಳಿಸುತ್ತದೆ.
ಯುರೋಪಿಯನ್ ಯೂನಿಯನ್ ಗಳ ಈ ನಿರ್ಬಂಧವು ರಷ್ಯಾಗೆ ಅನುಕೂಲವನ್ನ ಉಂಟುಮಾಡಲಿದೆ. ಏಕೆಂದರೆ ತೈಲ ಬೆಲೆಯಲ್ಲಿನ ಹೆಚ್ಚಳದಿಂದ ಕಡಿಮೆ ಬ್ಯಾರಲ್ಲುಗಳು ಮಾರಾಟವಾಗುವುದರಿಂದ ರಷ್ಯಾಕ್ಕೆ ಇದರಿಂದ ಲಾಭವಾಗಲಿದೆ ಎಂದು ವರದಿಗಳು ಹೇಳುತ್ತಿವೆ.