ಮಡಿಕೇರಿ: ಕೊಡಗಿನ ವೀರಯೋಧ ದಿ.ಜನರಲ್ ತಿಮ್ಮಯ್ಯ ನಿವಾಸ ಸನ್ನಿಸೈಡ್ ಮ್ಯೂಸಿಯಂ ಉದ್ಗಾಟನೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಫೆಬ್ರವರಿ 6ಕ್ಕೆ ಮಡಿಕೇರಿಗೆ ಆಗಮಿಸಲಿದ್ದಾರೆ.
ರಾಷ್ಟ್ರಪತಿಗಳು ಕೊಡಗು ಜಿಲ್ಲೆಯ ಪ್ರವಾಸದಲ್ಲಿ ಮೊದಲು ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಗೆ ತೆರಳಿ ಪತ್ನಿ ಸವಿತಾ ಕೋವಿಂದ್ ಜೊತೆ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂದು ಬೆಳಗ್ಗೆ ಚೆಟ್ಟಿಮಾನಿ ಹೆಲಿಪ್ಯಾಡ್‍ಗೆ ಆಗಮಿಸಲ್ಲಿರುವ ರಾಷ್ಟ್ರಪತಿಗಳು, ಬಳಿಕ ಭಾಗಮಂಡಲ-ತಲಕಾವೇರಿಗೆ ರಸ್ತೆ ಮೂಲಕ ಕಾರಿನಲ್ಲಿ ತೆರಳಿ ನಿಗದಿಯಂತೆ 9.30ಕ್ಕೆ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಬಳಿಕ ಮತ್ತೆ ಚೆಟ್ಟಿಮಾನಿ ಹೆಲಿಪ್ಯಾಡ್ ನಿಂದ ಮಡಿಕೇರಿಯ ಗಾಲ್ಫ್ ಮೈಧಾನಕ್ಕೆ ಮತ್ತೆ ಹೆಲಿಕಾಪ್ಟರ್ ಮೂಲಕ ತೆರಳಿ ಬಳಿಕ ಸುದರ್ಶನ್ ಅತಿಥಿ ಗೃಹದಲ್ಲಿ ವಿಶ್ರಾಂತಿ ಪಡೆದು 3 ಗಂಟೆಗೆ ಜನರಲ್ ತಿಮ್ಮಯ್ಯ ಸ್ಮಾರಕ ಮ್ಯೂಸಿಯಂ ಉದ್ಗಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಈಗಾಗಲೇ ರಾಷ್ಟ್ರಪತಿಗಳು ಭೇಟಿ ನೀಡುವ ಪ್ರದೇಶಗಳ ಪರಿಶೀಲನೆ ಕಾರ್ಯ ನಡೆಸಲಾಗುತ್ತಿದ್ದು, ಭದ್ರತೆ ದೃಷ್ಠಿಯಿಂದ ಹೆಚ್ಚುವರಿ ಹೆಲಿಕಾಪ್ಟರ್ ರಾಷ್ಟ್ರಪತಿಗಳ ಹೆಲಿಕಾಪ್ಟರ್ ಜೊತೆ ಆಗಮಿಸಲಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








