ಮನರಂಜನೆ, ಎಮೋಷನ್ಸ್ ನಿಂದ ಕೂಡಿದ ಫ್ಯಾಮಿಲಿ ಪ್ಯಾಕ್ Saaksha Tv
ಫ್ಯಾಮಿಲಿ ಪ್ಯಾಕ್ ಎಂಬ ವಿಶಿಷ್ಟ ಹೆಸರಿನೊಂದಿಗೆ ಇಂದು ತೆರೆ ಕಂಡ ಕನ್ನಡ ಚಿತ್ರ. ಈ ಚಿತ್ರವು ಸಖತ್ ಸೌಂಡ್ ಮಾಡುತ್ತಿದ್ದು, ಅಭಿಮಾನಿಗಳನ್ನು ಮನರಂಜಿಸುವಲ್ಲಿ ಯಶಸ್ವಿಯಾಗಿದೆ. ಅದ್ಧೂರಿಯಾಗಿ ತೆರೆಕಂಡ ಚಿತ್ರವು ಅದ್ಭುತವಾಗಿ ಪ್ರದರ್ಶನಗೊಳ್ಳುತ್ತಿದೆ.
ಪಿಆರ್ಕೆ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಚಿತ್ರವು ಮೂಡಿ ಬಂದಿದೆ. ಚಿತ್ರಕ್ಕೆ ಸಂಕಷ್ಟ ಕರ ಗಣಪತಿ ಚಿತ್ರದ ಖ್ಯಾತಿಯ ಅರ್ಜುನ್ ಕುಮಾರ್ ಚಿತ್ರಕ್ಕೆ ಆಕ್ಷ್ಯನ್ ಕಟ್ ಹೇಳಿದ್ದಾರೆ. ಈ ಚಿತ್ರವು ಅಪಾರ ತಾರಾ ಬಳಗವನ್ನೇ ಹೊಂದಿದ್ದಿದ್ದು, ಚಿತ್ರದಲ್ಲಿ ಲಿಖಿತ್ ಶೆಟ್ಟಿ ನಾಯಕನಾಗಿ, ಅಮೃತಾ ಅಯ್ಯಂಗಾರ್ ನಾಯಕಿಯಾಗಿ, ರಂಗಾಯಣ ರಘು ಅಚ್ಯುತ್ ಕುಮಾರ್ ಲಿಖಿತ್ ಶೆಟ್ಟಿ ತಂದೆ ಪಾತ್ರವನ್ನು ನಿರ್ವಹಿಸಿದ್ದಾರೆ.
ಲಿಖಿತ್ ಶೆಟ್ಟಿ-ಅಭಿ ಪಾತ್ರದಲ್ಲಿ, ಅಮೃತಾ-ಭೂಮಿಕಾ, ರಂಗಾಯಣ ರಘು-ಮಂಜುನಾಥ್,ಅಚ್ಯುತ್ ಕುಮಾರ್-ಪದ್ಮಜಾ ರಾವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನೂ ಈ ಚಿತ್ರವು ಮನರಂಜನೆ, ಎಮೋಷನ್ಸ್ ನಿಂದ ಕೂಡಿದ್ದು, ಅಭಿಮಾನಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.








