ಖ್ಯಾತ ಯಕ್ಷಗಾನ ಕಲಾವಿದ ನಿಧನ Saaksha Tv
ಮೂಡಬಿದಿರೆ: ಖ್ಯಾತ ಯಕ್ಷಗಾನ ಕಲಾವಿದ ವೇಣೂರು ವಾಮನ ಕುಮಾರ (47) ಅವರು ಮೂಡಬಿದಿರೆ ಸಮೀಪದ ಗಂಟಾಲಕಟ್ಟೆಯಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ.
ಕಳೆದ ರಾತ್ರಿ ಬೈಂದೂರು ತಾಲುಕಿನ ಕೋಣ್ಕಿ ಎಂಬಲ್ಲಿ ರಾತ್ರಿ ಯಕ್ಷಗಾನ ಪ್ರದರ್ಶನ ಮುಗಿಸಿ ಬೆಳಗಿನ ಜಾವ ಮನೆಗೆ ತೆರಳುವಾಗ ಅಪಘಾತ ಸಂಭವಿಸಿದೆ. ಇವರು ಧರ್ಮಸ್ಥಳ ಮೇಳ, ಕದ್ರಿ ಮೇಳ, ಮಂಗಳಾದೇವಿ ಮೇಳ ಮತ್ತು ಹಿರಿಯಡಕ ಮೇಳದಲ್ಲಿ ವೇಷಾಧಾರಿಯಾಗಿ ಮತ್ತು ಮೇಳದ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದರು.
26 ವರ್ಷಗಳಿಂದ ಯಕ್ಷಗಾನ ಮಾಡುತ್ತಿದ್ದು, ಹಾಸ್ಯ, ಸ್ತ್ರೀ, ಪುರುಷ ಮತ್ತು ಪುಂಡು ಎಲ್ಲ ಪ್ರಾಗಳನ್ನು ಮಾಡಿ ಸೈ ಎನಿಸಿಕೊಂಡಿದ್ದರು. ಹಾಗೇ ಪ್ರಮೀಳೆ, ಭ್ರಮರಕುಂತಳೆ, ಮಾಲಿನಿ, ಪ್ರಭಾವತಿ, ಪದ್ಮಾವತಿ, ಕಿನ್ನಿದಾರು, ದುರ್ಮುಖಿ, ಕುಶ-ಲವ, ಹುಂಡ-ಪುಂಡರು ಮತ್ತು ಚಂಡ-ಮುಂಡರು ಹೀಗೆ ಹಲವು ಪಾತ್ರಗಳಲ್ಲಿ ವಾಮನ ಕುಮಾರ ಅವರು ಮಿಂಚಿದ್ದರು.