ಟೀಮ್ ಇಂಡಿಯಾಗೆ ಕೈಕೊಡುತ್ತಿರುವ ರೆಟ್ರೋ ಬ್ಲೂ ಜೆರ್ಸಿಯ ಬಣ್ಣ..!
ರೆಟ್ರೋ ಬ್ಲೂ.. ಟೀಮ್ ಇಂಡಿಯಾದ ಹೊಸ ಜೆರ್ಸಿ. ಹಾಗಂತ ಇದರಲ್ಲಿ ವಿಶೇಷತೆ ಏನು ಇಲ್ಲ. ಹಳೆಯ ಬಣ್ಣ.. ಹೊಸ ಮೆರಗು ಅಷ್ಟೇ..
ಹೌದು, ಟೀಮ್ ಇಂಡಿಯಾ ಆಟಗಾರರು ಆಸ್ಟ್ರೇಲಿಯಾ ವಿರುದ್ಧ ಧರಿಸಿರುವ ಹೊಸ ಜೆರ್ಸಿಯ ಬಣ್ಣ ಮತ್ತು ಮಾದರಿ ತುಂಬಾ ಹಳೆಯದ್ದು. ಈ ಜೆರ್ಸಿಯ ಬಣ್ಣಕ್ಕೆ ಸುಮಾರು 28 ವರ್ಷಗಳ ಹಿಂದಿನ ಇತಿಹಾಸವಿದೆ.
ನೆನಪಿಸರಬಹುದು.. 1992ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡದ ಆಟಗಾರರು ಇದೇ ಬಣ್ಣದ ಜೆರ್ಸಿ ತೊಟ್ಟಿದ್ದರು. ಮಹಮ್ಮದ್ ಅಜರುದ್ದೀನ್, ಸಚಿನ್ ತೆಂಡುಲ್ಕರ್, ಕಪಿಲ್ ದೇವ್, ಜಾವಗಲ್ ಶ್ರೀನಾಥ್ ಮೊದಲಾದವರನ್ನು ಈ ಜೆರ್ಸಿಯಲ್ಲಿ ಕಾಣಿಸಿದ್ದರು.
ಇದೀಗ ಆಸ್ಟ್ರೇಲಿಯಾ ಸರಣಿಗೆ ಬಿಸಿಸಿಐ 28 ವರ್ಷಗಳ ಹಳೆಯದ ಮಾದರಿಯ ಜೆರ್ಸಿಯನ್ನು ಟೀಮ್ ಇಂಡಿಯಾ ಆಟಗಾರರಿಗೆ ನೀಡಿದೆ. ಆದ್ರೆ ಇಲ್ಲಿ ಸ್ವಲ್ಪ ಬದಲಾಗಿದೆ. 1992ರ ಜೆರ್ಸಿಯಲ್ಲಿ ಆಟಗಾರರ ಹೆಸರು ಮತ್ತು ದೇಶದ ಹೆಸರು ರಾರಾಜಿಸುತ್ತಿತ್ತು.
ಆದ್ರೆ ಇದೀಗ ಟೀಮ್ ಇಂಡಿಯಾ ಆಟಗಾರರು ಧರಿಸಿರುವ ಜೆರ್ಸಿಯಲ್ಲಿ ದೇಶದ ಮತ್ತು ಆಟಗಾರರ ಹೆಸರಿನ ಜೊತೆ ಜಾಹಿರಾತು ಕಂಪೆನಿಗಳ ಹೆಸರು ಕಣ್ಣಿಗೆ ಕಟ್ಟುವಂತಿದೆ.
ಈ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಸಾಕಷ್ಟು ಟೀಕೆಗಳು ಕೂಡ ಕೇಳಿಬರುತ್ತಿವೆ. ಕೆಲವು ನೆಟ್ಟಿಗರು ಟೀಮ್ ಇಂಡಿಯಾದ ಜೆರ್ಸಿಯ ಮೇಲೆ ರಾರಾಜಿಸುತ್ತಿರುವ ಜಾಹಿರಾತು ಕಂಪೆನಿಗಳ ಹೆಸರುಗಳನ್ನು ಕೂಡ ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ಟೀಮ್ ಇಂಡಿಯಾ ಆಟಗಾರರು ಧರಿಸಿರುವ ಟೀ ಶರ್ಟ್ ಬಣ್ಣ ಪೂರಕವಾಗಿಲ್ಲ. ಟೀಮ್ ಇಂಡಿಯಾಗೆ ಅದೃಷ್ಟದ ಬಣ್ಣವಲ್ಲ ಅಂತನೂ ಅಭಿಪ್ರಾಯಪಟ್ಟಿದ್ದಾರೆ.
ಟೀಮ್ ಇಂಡಿಯಾ ಆಟಗಾರರು ಧರಿಸಿರುವ ಟೀ ಶರ್ಟ್ ಅದು ದೇಶದ ಪ್ರತೀಕ.. ದೇಶದ ಹೆಮ್ಮೆ. ಟೀಮ್ ಇಂಡಿಯಾ ಆಟಗಾರರು ದೇಶದ 130 ಕೋಟಿ ಜನರನ್ನು ಪ್ರತಿನಿಧಿಸುತ್ತಾರೆ. ಆದ್ರೆ ಟೀ ಶರ್ಟ್ ಮೇಲೆ ಜಾಹಿರಾತು ಕಂಪೆನಿಗಳ ಹೆಸರಿನ ಬದಲು ದೇಶದ ಹೆಸರು ಎದ್ದು ಕಾಣಬೇಕು ಅನ್ನೋ ಅಭಿಮತವೂ ವ್ಯಕ್ತವಾಗಿದೆ.
ಈಗಾಗಲೇ ಟೀಮ್ ಇಂಡಿಯಾ ಏಕದಿನ ಸರಣಿಯಲ್ಲಿ ಸೋಲು ಅನುಭವಿಸಿದೆ. ಆಸ್ಟ್ರೇಲಿಯನ್ ಬ್ಯಾಟ್ಸ್ ಮೆನ್ ಗಳ ಅಬ್ಬರಕ್ಕೆ ಟೀಮ್ ಇಂಡಿಯಾದ ಬೌಲರ್ ಗಳು ಬೆದರಿದ್ದಾರೆ. ಹಾಗಾಗಿ ಟೀಮ್ ಇಂಡಿಯಾ ಆಟಗಾರರು ಧರಿಸಿರುವ ಜೆರ್ಸಿ ಅದೃಷ್ಟವಲ್ಲ ಎಂಬ ನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ ಅಭಿಮಾನಿಗಳು.
ಇದಕ್ಕೆ ಪೂರಕವಾದ ಅಂಕಿ ಅಂಶಗಳು ಮತ್ತು ನಿದರ್ಶನಗಳನ್ನು ಮುಂದಿಟ್ಟಿದ್ದಾರೆ. 1992ರ ವಿಶ್ವಕಪ್ ನಲ್ಲಿ ಇದೇ ಪೋಷಾಕಿನಲ್ಲಿ ಆಡಿರುವ ಭಾರತ ತಂಡ ಆಡಿರುವ ಎಂಟು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಮಾತ್ರ ಗೆದ್ದುಕೊಂಡಿದೆ.
ಹೀಗಾಗಿ ಟೀಮ್ ಇಂಡಿಯಾ ಆಟಗಾರರಿಗೆ ರೆಟ್ರೋ ಬ್ಲೂ ಬಣ್ಣದ ಜೆರ್ಸಿ ಅದೃಷ್ಟವಲ್ಲ. ದಯವಿಟ್ಟು ಜೆರ್ಸಿಯ ಬಣ್ಣ ಬದಲಾಯಿಸಿ ಅಂತ ಹೇಳುತ್ತಿದ್ದಾರೆ.







