ರೈತನ ಕೆಪ್ಯಾಸಿಟಿಗೆ ಶೋ ರೂಮ್ ಸಿಬ್ಬಂದಿ ಕಂಗಾಲು Saaksha Tv
ತುಮಕೂರು: ವಾಹನ ಖರೀದಿಸಲು ಬಂದ ರೈತನು ಧರಿಸಿರುವ, ಬಟ್ಟೆ ನೋಡಿ ಕಾರು ಶೋ ರೂಮ್ ಸಿಬ್ಬಂದಿ ಹಿಯಾಳಿಸಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಹೆಬ್ಬೂರು ಹೋಬಳಿಯ ರಾಮನಪಾಳ್ಯದ ರೈತ ಕೆಂಪೇಗೌಡ ಮತ್ತು 7 ಜನ ಸಹಪಾಟಿಗಳೊಂದಿಗೆ ಬೊಲೆರೊ ಗೂಡ್ಸ್ ವಾಹನ ಖರೀದಿಸಲು ಹೋಗಿದ್ದರು. ಆಗ ರೈತ ಧರಿಸಿದ ಬಟ್ಟೆ ಕಂಡು ಶೋ ರೂಮ್ ಸಿಬ್ಬಂದಿ ಹತ್ತು ರೂಪಾಯಿ ಕೊಡುವ ಯೋಗ್ಯತೆ ಇಲ್ಲ ನಿನಗೆ. ವಾಹನ ತೆಗೆದುಕೊಳ್ಳಲು ಬಂದಿದ್ದಿಯಾ? ಎಂದು ರೈತನಿಗೆ ಹಿಯಾಳಿಸಿದ್ದಾರೆ. ಇದರಿಂದ ಅಪಮಾನ ಗೊಂಡ ರೈತ ಒಂದು ತಾಸಿನಲ್ಲಿ 10 ಲಕ್ಷ ರೂ ಹೊಂದಿಸಿ ವಾಹನ ಡೆಲೆವರಿ ಕೊಡುವಂತೆ ಪಟ್ಟು ಹಿಡಿದಿದ್ದಾರೆ.
ಇದಕ್ಕೆ ಶೋ ರೂಮ್ ಸಿಬ್ಬಂದಿ ವಾಹನ ನೀಡಲು 3 ದಿನ ಸಮಯ ಕೇಳಿದ್ದಾರೆ. ಇದಕ್ಕೆ ಒಪ್ಪದ ರೈತ ಈಗಲೇ ಡೆಲೆವರಿಕೊಡುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಸಿಬ್ಬಂದಿ ಒಪ್ಪದೆ ಇದ್ದಾಗ ರೈತ ಕೆಂಪೇಗೌಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆಗ ಪೊಲೀಸರು ಶೋ ರೂಮ್ ಸಿಬ್ಬಂದಿ ಹಾಗೂ ಅಲ್ಲಿನ ಅಧಿಕಾರಿಗಳಿಂದ ಕ್ಷಮೆಯಾಚನೆ ಮುಚ್ಚಳಿಕೆ ಬರೆಸಿಕೊಂಡು ಪ್ರಕರಣವನ್ನು ಇತ್ಯರ್ಥ ಮಾಡಿದ್ದಾರೆ.








