ಮೈಸೂರು : ಜಿಲ್ಲೆಯ ಚಾಮರಾಜೇಂದ್ರ ಮೃಗಾಲಯಕ್ಕೆ ವಿದೇಶಿ ಮೂಲದ ಹೊಸ ಅತಿಥಿಯೊಂದು ಆಗಮನವಾಗಿದೆ. ದೂರದ ದಕ್ಷಿಣ ಆಫ್ರಿಕಾದಿಂದ ಪ್ರಪಂಚದಲ್ಲೇ ಅತಿ ವೇಗವಾಗಿ ಚಲಿಸುವ ಪ್ರಾಣಿ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಚೀತಾ ಮೈಸೂರು ಮೃಗಾಲಯಕ್ಕೆ ಬಂದಿದೆ. ಇದನ್ನು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ, ಸಿಂಗಾಪುರ ಮಾರ್ಗವಾಗಿ ಮೈಸೂರು ಮೃಗಾಲಯಕ್ಕೆ ತರಲಾಗಿದೆ.
ಮೃಗಾಲಯ ನಿರ್ದೇಶಕ ಅಜಿತ್ ಕುಲಕರ್ಣಿ ನೇತೃತ್ವದಲ್ಲಿ ಚೀತಾವನ್ನು ವಿನಿಮಯ ಮಾಡಿಕೊಳ್ಳಲಾಗಿದೆ. ಚಿರತೆ ಈಗಾಗಲೇ ಮೈಸೂರು ಮೃಗಾಲಯ ತಲುಪಿದ್ದು, ಕ್ವಾರಂಟೈನ್ ಅವಧಿ ಪೂರ್ಣಗೊಂಡ ನಂತರ ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗಲಿದೆ.
ಮೊದಲೆಲ್ಲ ಪ್ರಾಣಿ ವಿನಿಮಯ ಯೋಜನೆ ಮೂಲಕ ದೇಶದ ವಿವಿಧ ಭಾಗಗಳಿಂದ ಪ್ರಾಣಿಗಳನ್ನು ಮೈಸೂರು ಮೃಗಾಲಯಕ್ಕೆ ತರಲಾಗಿದ್ದು, ಹಲವು ಪ್ರಾಣಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಬಹುಶಃ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪ್ರಾಣಿ ವಿನಿಮಯ ಯೋಜನೆ ಮೂಲಕ ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯಕ್ಕೆ ವಿದೇಶಿ ಅತಿಥಿಯ ಆಗಮನವಾಗಿದೆ.
African Cheetah! Yes arrived from South Africa via Singapore @Mysore_Zoo. Congratulations toTeam Mysuru, led by Director #Ajitkulkarni.After quarantine period,available for public display.@CZA_Delhi @aranya_kfd @AnandSinghBS @STSomashekarMLA @MysoorunewsC @PTI_News @ANINewsUP pic.twitter.com/cU32q2Q77d
— Zoos of Karnataka (@ZKarnataka) August 18, 2020