ಬೆಂಗಳೂರು: ಮಗ ಓದದೆ ಮೊಬೈಲ್ ನೋಡುತ್ತಿದ್ದರಿಂದ ಕೋಪಗೊಂಡ ತಂದೆ ಕ್ರಿಕೆಟ್ ಬ್ಯಾಟ್ನಿಂದ (Cricket Bat) ತಲೆಗೆ ಹೊಡೆದು, ಕೊಲೆ ಮಾಡಿರುವ ಘಟನೆ ನಡೆದಿದೆ.
ಈ ಘಠನೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ (Kumaraswamy Layout) ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತೇಜಸ್ (14) ಸಾವನ್ನಪ್ಪಿರುವ ಬಾಲಕ. ತೇಜಸ್ ಇತ್ತೀಚೆಗೆ ಶಾಲೆಗೆ ಹೋಗಿರಲಿಲ್ಲ. ಶಾಲೆಗೆ ಹೋಗದೆ, ಹುಡುಗರೊಂದಿಗೆ ತಿರುಗಾಟ ನಡೆಸುತ್ತಿದ್ದ. ತೇಜಸ್ ರಾತ್ರಿ ಮನೆಗೆ ಬಂದು ಮೊಬೈಲ್ನಲ್ಲಿ ರೀಲ್ಸ್, ವೀಡಿಯೋ ಗೇಮ್ ಆಡುತ್ತಿದ್ದ. ಕುಡಿದು ಮನೆಗೆ ಬಂದಿದ್ದ ತಂದೆ ರವಿಕುಮಾರ್ ಮಗ ಮೊಬೈಲ್ ನೋಡುತ್ತಿರುವುದನ್ನು ಕಂಡು ಕೋಪಗೊಂಡು ಕ್ರಿಕೆಟ್ ಬ್ಯಾಟ್ ನಿಂದ ತಲೆಗೆ ಹೊಡೆದಿದ್ದಾನೆ. ಪರಿಣಾಮ ತೇಜಸ್ ಗಂಭರವಾಗಿ ಗಾಯಗೊಂಡಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಘಟನಾ ಸ್ಥಳಕ್ಕೆ ಕುಮಾರಸ್ವಾಮಿ ಲೇಔಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತಂದೆಯನ್ನು ವಶಕ್ಕೆ ಪಡೆಯಲಾಗಿದೆ.








