ರಗಡ್ ಆಗಿದೆ ಮದಗಜ ಟೈಟಲ್ ಟ್ರಾಕ್
ಶ್ರೀ ಮುರಳಿ ಅಭಿನಯದ ಬಹು ನಿರಿಕ್ಷಿತ ಚಿತ್ರ ಮದಗಜದ ಟೈಟಲ್ ಸಾಂಗ್ ನ ಚಿತ್ರ ತಂಡ ಬಿಡಗಡೆ ಮಾಡಿದೆ. ರವಿ ಬಸ್ರೂರ್ ಸಂಗೀತದಲ್ಲಿ ಕಿನ್ನಲ್ ರಾಜ್ ಸಾಹಿತ್ಯದಲ್ಲಿ ಸಂತೋಷ್ ವೆಂಕಿ ದ್ವನಿಯಲ್ಲಿ ಶ್ರೀಮುರಳಿ ರಗಡ್ ಲುಕ್ ನಲ್ಲಿ ಹಾಡು ಸೂಪರ್ ಆಗಿ ಹೊರಬಂದಿದೆ. ಆನಂದ ಆಡಿಯೋ ಯ್ಯೂಟ್ಯೂಬ್ ಚಾನೆಲ್ ನಲ್ಲಿ ಈ ಹಾಡನ್ನ ನೋಡಿ ಆನಂದಿಸಬಹುದು. ಈ ಹಿಂದೆ ಇದೇ ಚಿತ್ರದ ಗೆಳಯ ನನ್ನ ಗೆಳೆಯ ಎನ್ನುವ ಮೆಲೋಡಿ ಹಾಡು ಬಿಡುಗಡೆಯಾಗಿತ್ತು. ಶ್ರೀ ಮುರುಳಿಗೆ ಜೋಡಿಯಾಗಿ ಅಶಿಕಾ ರಂಗನಾಥ್ ಕಾಣಿಸಿಕೊಂಡಿದ್ದಾರೆ.
ಉಮಾಪತಿ ಫಿಲಂಸ್ ಬ್ಯಾನರ್ನಲ್ಲಿ ಚಿತ್ರ ನಿರ್ಮಾಣಗೊಂಡಿದ್ದು ಎಸ್ ಮಹೇಶ ಕುಮಾರ್ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ.. ಮದಗಜ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಐದು ಬಾಷೆಗಳಲ್ಲಿ ತೆರೆಗೆ ಬರಲಿದೆ.