Mysore | ರಾಜ್ಯದ ಮೊದಲ ವೈ-ಫೈ ಗ್ರಾಮ
ರಮ್ಮನಹಳ್ಳಿಯಲ್ಲಿ ಸಾರ್ವಜನಿಕ ದತ್ತಾಂಶ ಕೇಂದ್ರ
ವೈ-ಫೈ ಪಡೆದ ರಾಜ್ಯದ ಮೊದಲ ಗ್ರಾಮ ರಮ್ಮನಹಳ್ಳಿ
ಗ್ರಾಮದ 8 ಕಡೆ ಸಾರ್ವಜನಿಕ ದತ್ತಾಂಶ ಕೇಂದ್ರ ಸ್ಥಾಪನೆ
ದೇವೇಶ್ ಕುಮಾರ್ ಅವರಿಂದ ಯೋಜನೆ ಉದ್ಘಾಟನೆ
ಮೈಸೂರು : ರಾಜ್ಯದಲ್ಲಿ ಮೊದಲ ಬಾರಿಗೆ ಮೈಸೂರಿನ ರಮ್ಮನಹಳ್ಳಿಯಲ್ಲಿ ಸಾರ್ವಜನಿಕ ದತ್ತಾಂಶ ಕೇಂದ್ರವನ್ನು ಸ್ಥಾಪನೆ ಮಾಡಲಾಗಿದೆ.
ಇದರೊಂದಿಗೆ ಸಾರ್ವಜನಿಕ ವೈ-ಫೈ ಪಡೆದ ರಾಜ್ಯದ ಮೊದಲ ಗ್ರಾಮ ರಮ್ಮನಹಳ್ಳಿಯಾಗಿದೆ.
ಬಿಎಸ್ಎನ್ಎಲ್ ಸಾರ್ವಜನಿಕ ವೈ-ಫೈ ನೀತಿಯಡಿ ಭಾರತ್ ಸಂಚಾರ ನಿಗಮ ನಿಯಮಿತದ ಕರ್ನಾಟಕ ವೃತ್ತದ ಮುಖ್ಯ ಪ್ರಧಾನ ವ್ಯವಸ್ಥಾಪಕ ದೇವೇಶ್ ಕುಮಾರ್ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಯೋಜನೆ ಉದ್ಘಾಟನೆ ಮಾಡಲಿದ್ದಾರೆ.
ಬಿಎಸ್ಎನ್ಎಲ್ನ ಮೈಸೂರು ವೃತ್ತ ಗ್ರಾಮಕ್ಕೆ ಆಪ್ಟಿಕಲ್ ಫೈಬರ್ ಸಂಪರ್ಕದ ಮೂಲಕ 8 ಕಡೆ ಸಾರ್ವಜನಿಕ ದತ್ತಾಂಶ ಕೇಂದ್ರವನ್ನು ಸ್ಥಾಪನೆ ಮಾಡಿದೆ.
ಗ್ರಾಮದ 32 ಪ್ರದೇಶಗಳಲ್ಲಿ ವೈ-ಫೈ ಹಾಟ್ ಸ್ಟಾಟ್ ಲಭ್ಯವಿರಲಿದೆ. ಬಿಎಸ್ಎನ್ಎಲ್ ವೈ-ಫೈ 69 ಸೇರಿದಂತೆ 5 ಯೋಜನೆಗಳನ್ನು ಜನರಿಗಾಗಿ ಪರಿಚಯಿಸಲಾಗಿದೆ.
ಈ ಯೋಜನೆಯಡಿ ರಮ್ಮನಹಳ್ಳಿ ಗ್ರಾಮದ ಜನರು 69 ರೂ. ಪಾವತಿ ಮಾಡಿ 30 ದಿನದ ತನಕ 300 ಜಿಡಿ ಡೇಟಾವನ್ನು ಪಡೆಯಬಹುದಾಗಿದೆ.
ಬಿಎಸ್ಎನ್ಎಲ್ ವೈಫೈ 9 ಯೋಜನೆಯಡಿ 9 ರೂ. ಪಾವತಿ ಮಾಡಿದರೆ 1 ದಿನಕ್ಕೆ 1 ಜಿಬಿ ಡೇಟಾ ಪಡೆಯಬಹುದಾಗಿದೆ.
The first complete WiFi village in the state is ready at Rammanahalli Mysore









