ಕೊರೊನಾ ಬಳಿಕ ಕನ್ನಡದಲ್ಲಿ ರಿಲೀಸ್ ಆಗುತ್ತಿರುವ ಮೊದಲ ಸಿನಿಮಾ ‘ರಣಂ’.
ಅನ್ ಲಾಕ್ 5.0 ಅನ್ವಯ ಕೇಂದ್ರದ ಮಾರ್ಗಸೂಚಿಯಂತೆ ಅಕ್ಟೋಬರ್ 15ರಿಂದ ಚಿತ್ರಮಂದಿರಗಳು ಪುನರಾರಂಭವಾಗಲಿದೆ.
ಈ ನಡುವೆ ಲಾಕ್ ಡೌನ್ ಬಳಿಕ ಬೆಳ್ಳಿ ತೆರೆಗಪ್ಪಳಿಸಿರುವ ಚಿತ್ರಗಳು ಯಾವು ಎಂಬ ಕುತೂಹಲ ಸಿನಿಪ್ರಿಯರಲ್ಲಿ ಮನೆಮಾಡಿದೆ.
ಸುಮಾರು 6- 7 ತಿಂಗಳುಗಳ ಕಾಲ ಬಂದ್ ಚಿತ್ರಮಂದಿರಗಳು ಬಂದ್ ಆಗಿದ್ದ ಪರಿಣಾಮ ಚಿತ್ರದ್ಯೋಮವನ್ನೇ ನಂಬಿಕೊಂಡಿದ್ದ
ಕಾರ್ಮಿಕರು ಪರದಾಡುವಂತಾಗಿತ್ತು.
ಅನುಶ್ರೀ ಡ್ರಗ್ಸ್ ಪಾರ್ಟಿ ಕಂಟಕ..? ಫೇಸ್ ಬುಕ್ ವಿಡಿಯೋದಲ್ಲಿ ಕಣ್ಣೀರಿಟ್ಟಿದ್ದೇಕೆ..!
ಇನ್ನೂ ಲಾಕ್ ಡೌನ್ ಬಳಿಕ ಮೊದಲಿಗೆ ಬೆಳ್ಳಿತೆರೆಗಪ್ಪಳಿಸಲಿರುವ ಚಿತ್ರ ಚಿರಂಜೀವಿ ಸರ್ಜಾ ಮತ್ತು ಚೇತನ್ ಕುಮಾರ್ ಅವರ ಅಭಿನಯದ ‘ರಣಂ’..
ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ಚಿರು ಅವರನ್ನ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ.
ಚಿತ್ರದಲ್ಲಿ ಚೇತನ್ ಗೆ ನಾಯಕಿಯಾಗಿ ತಮಿಳು ನಟಿ ವರಲಕ್ಷ್ಮಿ ಶರತ್ ಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಹಿಂದೆ ಕಿಚ್ಚ ಸುದೀಪ್ ಜೊತೆ ‘ಮಾಣಿಕ್ಯ’ ಚಿತ್ರದಲ್ಲಿ ಅಭಿನಯಿಸಿದ್ದ ವರಲಕ್ಷ್ಮಿ ನಂತರ ಅರ್ಜುನ್ ಸರ್ಜಾ ಅಭಿನಯದ ‘ವಿಸ್ಮಯ’ ಚಿತ್ರದಲ್ಲಿ
ಕಾಣಿಸಿಕೊಂಡಿದ್ದರು. ಈಗ ‘ರಣಂ’ ಮೂಲಕ ಮತ್ತೆ ಸಿಲ್ವರ್ ಸ್ಕ್ರೀನ್ ಮೇಲೆ ಬರ್ತಿದ್ದಾರೆ.
ಇನ್ನೂ ಇತ್ತೀಚೆಗಷ್ಟೇ ಲಾಕ್ ಡೌನ್ ಸಮಯದಲ್ಲಿ ನಟ ಚಿರಂಜೀವಿ ಸರ್ಜಾ ಅವರು ವಿಧಿವಶರಾಗಿದ್ದರು..
ಅವರ ನಿಧನದ ಕೆಲ ತಿಂಗಳುಗಳ ಬಳಿಕ ಅವರ ನಟೆನೆಯ ಬಹುನಿರೀಕ್ಷಿತ ಚಿತ್ರ ತೆರೆಗಪ್ಪಿಳಿಸಲು ಸಜ್ಜಾಗಿದ್ದು,
ಲಾಕ್ ಡೌನ್ ಬಳಿಕ ರಿಲೀಸ್ ಆಗುತ್ತಿರುವ ಮೊದಲ ಕನ್ನಡದ ಸಿನೆಮಾವಾಗಿದೆ.