ಪ್ಲೇ ಸ್ಟೋರಿ ಗಾಗಿ ಪೇಟಿಎಂ ಮತ್ತು ಗೂಗಲ್ ನಡುವೆ ಮುಸುಕಿನ ಗುದ್ದಾಟ…!
ಬೆಂಗಳೂರು, ಸೆಪ್ಟೆಂಬರ್22: ಸ್ಕ್ರ್ಯಾಚ್ ಕಾರ್ಡ್ ಆಧಾರಿತ ಕ್ರಿಕೆಟ್ ಪ್ರಚಾರವನ್ನು ನಡೆಸಲು ತಂತ್ರಜ್ಞಾನದ ಪ್ರಮುಖ ಮೊಬೈಲ್ ಪಾವತಿ ಪ್ಲಾಟ್‌ಫಾರ್ಮ್‌ನ ಅಪ್ಲಿಕೇಶನ್ ಅನ್ನು, ಜೂಜಿನ ನೀತಿಗಳನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ ಪ್ಲೇ ಸ್ಟೋರ್‌ನಿಂದ ತಾತ್ಕಾಲಿಕವಾಗಿ ತೆಗೆದುಹಾಕಿದ ನಂತರ ಇದೆ ಮೊದಲ ಬಾರಿ ಪೇಟಿಎಂ ಸಂಸ್ಥಾಪಕ ಮತ್ತು ಸಿಇಒ ವಿಜಯ್ ಶೇಖರ್ ಶರ್ಮಾ ಪ್ರತಿಕ್ರಿಯೆ ನೀಡಿದ್ದು ಸರ್ಕಾರ ಹಸ್ತಕ್ಷೇಪವನ್ನೂ ಬಯಸುತ್ತದೆ ಎಂದು ಅವರು ಹೇಳಿದರು.ಇದೆ ಸಂದರ್ಭದಲ್ಲಿ ಗೂಗಲ್ ವಿರುದ್ಧ ಕಾನೂನು ಸಮರಕ್ಕೆ ಎಲ್ಲಾ ಆಯ್ಕೆಗಳು ಮುಕ್ತವಾಗಿವೆ ಎಂದು ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ವಿಜಯ್ ಶೇಖರ್ ಶರ್ಮಾ ಭಾರತೀಯ ಕಾನೂನುಗಳಿಗೆ ಅನುಸಾರವಾಗಿ ನಾವು ಅಪ್ಲಿಕೇಶನ್‌ಗಳನ್ನು ತಯಾರಿಸಿದ್ದು ಅದನ್ನು ನಿಷೇಧಿಸುವ ಗೂಗಲ್‌ನ ಅಭ್ಯಾಸವನ್ನು ತೀವ್ರವಾಗಿ ಖಂಡಿಸಿದರು. ನಮ್ಮದು ಭಾರತದ ಸ್ಟಾರ್ಟ್ ಅಪ್ ಕಂಪನಿ ಆಗಿದ್ದು ಹೊಸ ಹೊಸ ತಂತ್ರಜ್ಞಾನದ ಮೂಲಕ ಅಭಿವೃದ್ಧಿಪಡಿಸಲು ಇಚ್ಛಿಸುತ್ತೇವೆ ಎಂದರು.
ಪ್ಲೇ ಸ್ಟೋರ್‌ನಿಂದ ಹೊರಹಾಕಿದಕ್ಕೆ ಕಂಪನಿಯು ವಿವರಣೆಯನ್ನು ಕೇಳಿದ್ದು ನಮ್ಮ ಅಪ್ಲಿಕೇಶನ್ ಜೂಜಿನ ಅಪ್ಲಿಕೇಶನ್ ಅಲ್ಲ. ಈ ಹೋರಾಟ ದೀರ್ಘಕಾಲ ನಡೆಯಬಹುದು. ಸುಮ್ಮನೆ ನಮ್ಮ ಅಪ್ಲಿಕೇಶನ್ ಅನ್ನು ಗುರಿ ಮಾಡಲಾಗಿದೆ ಅವರು ಹೇಳಿದರು.
ಇದಕ್ಕೆ ಇಮೇಲ್ ಮೂಲಕ ಪ್ರತಿಕ್ರಿಯಿಸಿದ ಗೂಗಲ್ ವಕ್ತಾರರು, ಕ್ಯಾಶ್‌ಬ್ಯಾಕ್ ಮತ್ತು ಚೀಟಿಗಳನ್ನು ಮಾತ್ರ ನೀಡಿದರೆ ಅದು ನಮ್ಮ ಗೂಗಲ್ ಪ್ಲೇ ಸ್ಟೋರಿನ ಜೂಜಿನ ನೀತಿಗಳನ್ನು ಉಲ್ಲಂಘನೆ ಮಾಡಿದಂತೆ ಆಗುವುದಿಲ್ಲ. ಆದರೆ ನಮ್ಮ ನೀತಿಗಳು ಆನ್‌ಲೈನ್ ಕ್ಯಾಸಿನೊಗಳನ್ನು ಅಥವಾ ಕ್ರೀಡಾ ಬೆಟ್ಟಿಂಗ್‌ಗೆ ಅನುಕೂಲವಾಗುವ ಯಾವುದೇ ಅನಿಯಂತ್ರಿತ ಜೂಜಿನ ಅಪ್ಲಿಕೇಶನ್‌ಗಳನ್ನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.








