‘ನರಕ’ದಲ್ಲಿ ಚಿತ್ರಹಿಂಸೆ ಅನುಭವಿಸುತ್ತಿದ್ದ ಯುವತಿ ಬಾಳಿಗೆ ಬೆಳಕಾದವರು ಈ ಮೂವರು..!
ನಿತ್ಯ ನರಕರದಲ್ಲಿ ಜೀವನ ಸಾಗಿಸುತ್ತಿದ್ದ ಯುವತಿಗೆ ಇದೀಗ ಮರುಜೀವ ಸಿಕ್ಕಂತಾಗಿದೆ. ತಂದೆ ತೀರಿಕೊಂಡಾಗಿನಿಂದಲೂ ಮಲತಂದೆ ತಾಯಿಯಿಂದ ಚಿತ್ರಹಿಂಸೆ ಅನುಭವಿಸುತ್ತಿದ್ದ ಈ ಯುವತಿ ಪಾಲಿಗೆ ಬೆಳಕಾದ ಮೂವರಿಗೆ ನಮ್ಮ ಸಲಾಂ. ಯಾಕಂದ್ರೆ ಹೆತ್ತವರನ್ನೇ ನೋಡಿಕೊಳ್ಳೋಕೆ ಹಿಂದು ಮುಂದು ನೋಡುತ್ತಿರುವ ಈ ದಿನಗಳಲ್ಲಿ ಮಾನವೀಯತೆ ಮೆರೆದು ಇತರರಿಗೆ ಮಾದರಿಯಾದ ಇವರ ಕಾರ್ಯ ನಿಜಕ್ಕೂ ಶ್ಲಾಘನೀಯ.
ಅಂದ್ಹಾಗೆ ಮೂಲತಃ ಕೊಂಡಾಜಿ ನಿವಾಸಿಯಾಗಿರುವ 18 ವರ್ಷದ ಸೂರ್ಯಪ್ರಭಾ ವರ್ಷಗಳ ಹಿಂದೆಯೇ ತನ್ನ ತಂದೆಯನ್ನು ಕಳೆದಕೊಂಡಿದ್ದಳು. ಈಕೆ ಪಜಯನ್ನೂನಲ್ಲಿರುವ ವ್ಹೀಲರ್ ಶಾಪ್ನಲ್ಲಿ ಕೆಲ ದಿನಗಳವರೆಗೆ ಕೆಲಸ ಮಾಡಿದ್ದಳು. ಚಿಕ್ಕ ವಯಸ್ಸಿನಿಂದಲೂ ಮಲತಂದೆ ಹಾಗೂ ತಾಯಿಯ ಕಿರುಕುಳವನ್ನ ಸಹಿಸಿಕೊಂಡೇ ಬಂದಿದ್ದಳು. ಆಕೆಯ ಪರಸ್ಥಿತಿ ನೋಡಿ ಗ್ರಾಮಸ್ಥರು ಮರುಕ ವ್ಯಕ್ತಪಡಿಸುತ್ತಿದ್ದರು. ಆದ್ರೆ ಒಂದು ದಿನ ಗ್ರಾಮಸ್ಥರು ಈ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದಂತೆ ಸೂರ್ಯಪ್ರಭಾಳ ಮಲತಂದೆಯನ್ನ ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಸೂರ್ಯಪ್ರಭಾಳನ್ನ ಸಹ ಕರೆತಂದು ವಿಚಾರಣೆ ನಡೆಸಿದ್ದರು. ಈ ವೇಳೆ ಸೂರ್ಯಪ್ರಭಾ ಮನೆಗೆ ವಾಪಸ್ ಹೋಗಲು ನಿರಾಕರಿಸಿದ್ದಾಳೆ. ಆಗ ಈಕೆ ಕೆಲಸ ಮಾಡಿದ್ದ ಅಂಗಡಿ ಮಾಲೀಕರಾದ ಶಿವದಾಸನ್ ಹಾಗೂ ನಿಶಾ ದಂಪತಿ ಈ ವಿಚಾರ ತಿಳಿದು ಪೊಲೀಸ್ ಠಾಣೆಗೆ ದಾವಿಸಿದ್ದಾರೆ. ಇನ್ನೂ ಈ ದಂಪತಿಗೆ ಮಕ್ಕಳಿರಲಿಲ್ಲ. ಕೆಲಸ ಮಾಡುತ್ತಿದ್ದ ವೇಳೆ ಸೂರ್ಯಪ್ರಭಾಳನ್ನೇ ಸ್ವಂತ ಮಗಳಂತೆ ನೋಡಿಕೊಂಡಿದ್ದರು. ಈಕೆಯ ಪರಿಸ್ಥಿತಿ ಅರಿತ ಶಿವದಾಸನ್ ದಂಪತಿ ಪೊಲೀಸರ ಬಳಿ ಆಕೆಯನ್ನ ದತ್ತು ಪಡೆಯಲು ಮನವಿ ಮಾಡಿಕೊಂಡರು. ಬಳಿಕ ಕಾನೂನುಬದ್ಧವಾಗಿ ಆಕೆಯನ್ನ ದತ್ತುಪಡೆದು ಆಕೆಯ ಜೀವನಕ್ಕೆ ಹೊಸ ಬೆಳಕು ತುಂಬಿದರು. ಆಕೆಯ ಹೊಸಬದುಕಿಗೆ ದಾರಿದೀಪವಾದ್ರು. ಬಳಿಕ ಆಕೆಯನ್ನ ಮನೆಗೆ ಕರೆದೊಯ್ದರು.
ತಂಗಿಯ ಮೇಲೆ ಅಕ್ಕ ಹಾಗೂ ಆಕೆಯ ಸ್ನೇಹಿತರಿಂದಲೇ ನಿರಂತರ ಲೈಂಗಿಕ ದೌರ್ಜನ್ಯ ..!
ಇತ್ತ ತಿರುವಿಲ್ವಮಲಾ ನಿವಾಸಿ ಮನೋಜ್ ಎಂಬಾತ ಸೂರ್ಯಪ್ರಭಾಳ ಬಗ್ಗೆ ಮಾಹಿತಿ ತಿಳಿದು ಆಕೆಯನ್ನ ವಿವಾಹವಾಗಲು ಮುಂದಾದ. ದತ್ತು ಪೋಷಕರ ಬಳಿ ಕನ್ಯಾದಾನ ಮಾಡಿಕೊಡುವಂತೆ ಕೇಳಿಕೊಂಡಿದ್ದಾನೆ. ಬಳಿಕ ಇದಕ್ಕೆ ಒಪ್ಪಿದ ಪೋಷಕರು ಸೂರ್ಯಪ್ರಭಾಳಿಗೆ ಮನೋಜ್ ಜೊತೆಗೆ ಮದುವೆ ಮಾಡಿಕೊಟ್ಟಿದ್ದಾರೆ. ಕೊಡತೂರ್ ಭಗವತಿ ದೇವಸ್ಥಾನದಲ್ಲಿ ಮದುವೆ ಸಮಾರಂಭ ನೆರವೇರಿದೆ. ಒಟ್ಟಾರೆ ನಿತ್ಯ ನರಕದಲ್ಲಿ ಚಿತ್ರಹಿಂಸೆ ಅನುಭವಿಸುತ್ತಿದ್ದ ಈ ಯುವತಿ ಪಾಲಿಗೆ ಈ ಮೂವರು ದೇವರಂತೆ ಬಂದು ಬದುಕನ್ನ ಬದಲಾಯಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








