ನಿವೃತ್ತ ಪಶುವೈದ್ಯರ ಮೊಮ್ಮಗನನ್ನು ಅಪಹರಿಸಿದ್ದ ಬಾಲಕಿಯೊಬ್ಬಳು ಬರೋಬ್ಬರಿ 50 ಲಕ್ಷ ರೂ.ಗೆ ಬೇಡಿಕೆ ಇಟ್ಟಿರುವ ಘಟನೆ ಪಾಟ್ನಾದಲ್ಲಿ ಬೆಳಕಿಗೆ ಬಂದಿದೆ.
ಡಿಪ್ಲೊಮಾ ವಿದ್ಯಾರ್ಥಿಗೆ ಅಪಹರಣ ಮಾಡಿದ್ದ ಯುವತಿ ಇನ್ಸ್ಟಾಗ್ರಾಂದಲ್ಲಿ ಪರಿಚಯವಾಗಿದ್ದಳು. ಹೀಗಾಗಿ ಆತ ಬಾಲಕಿಯನ್ನು ಭೇಟಿ ಮಾಡಲು ಗಯಾದಿಂದ ಆಗಮಿಸಿದ್ದರು. ಈ ಸಂದರ್ಭದಲ್ಲಿ ಆತನನ್ನು ಅಪಹರಿಸಿ 50 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾಳೆ. ಈ ಘಟನೆ ಕುರಿತು ಕುಟುಂಬದವರು ಪೊಲೀಸರಿಗೆ ದೂರು ನೀಡಿ, ಎಫ್ಐಆರ್ ದಾಖಲಿಸಿದ್ದರು. ವಿಷಯದ ಗಂಭೀರತೆಯನ್ನು ಅರಿತ ಎಸ್ಎಸ್ಪಿ ಆಶಿಶ್ ಭಾರ್ತಿ ಅವರು ಬೆಳಗಂಜ್ ಪೊಲೀಸ್ ಸಂಪೂರ್ಣ ತನಿಖೆ ನಡೆಸಿದ್ದಾರೆ.
ನಿಮ್ಮ ಮಗ ಜೀವಂತ ಬೇಕೆಂದರೆ 50 ಲಕ್ಷ ರೂ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಆತನ ಸ್ನೇಹಿತರ ಬಳಿ ಮಾತನಾಡಿದಾಗ ರಿಷಬ್ ಇನ್ಸ್ಟಾಗ್ರಾಂನಲ್ಲಿ ಯುವತಿಯೊಬ್ಬಳನ್ನು ಭೇಟಿಯಾಗಿದ್ದ, ಆಕೆಯನ್ನು ಬೇಟಿಯಾಗಲು ಹೋಗಿದ್ದಾಗಿ ತಿಳಿಸಿದ್ದಾರೆ. ರಿಷಭ್‌ನ ಮೊಬೈಲ್ ಫೋನ್ ಅನ್ನು ಟ್ರೇಸ್ ಮಾಡುವುದರಿಂದ ಪಾಟ್ನಾದ ಸಂಪತ್‌ಚಕ್‌ನಲ್ಲಿ ಅವನ ಕೊನೆಯ ಸ್ಥಳವನ್ನು ತೋರಿಸಲಾಯಿತು. ನಂತರ ಫೋನ್ ಸ್ವಿಚ್ ಆಫ್ ಆಗಿತ್ತು. ಬಾಲಕಿಯನ್ನು ಪಾಟ್ನಾದ ಗಾರ್ಡನಿಬಾಗ್ ನಲ್ಲಿ ಬಂಧಿಸಲಾಗಿದೆ. ಮತ್ತು ಅವಳು ಅಪ್ರಾಪ್ತಳು ಎಂದು ಪೊಲೀಸರು ತಿಳಿಸಿದ್ದಾರೆ.








