ಶಮನಿಸಂ ಹೆಸರಲ್ಲಿ ನಾಪತ್ತೆಯಾಗಿದ್ದ ಬಾಲಕಿ ಗುಜರಾತ್ ನಲ್ಲಿ ಪತ್ತೆ.
ಬೆಂಗಳೂರಿನಲ್ಲಿ ಕೆಲ ದಿನಗಳ ಹಿಂದೆ ಬಾಲಕಿಯೊಬ್ಬಳು ಕಾಣೆಯಾಯಾಗಿದ್ದಳು. ಅದ್ಯಾತ್ಮದ ಪ್ರಭಾವ, ಶಮನಿಸಂ ಎನ್ನುವ ತಂತ್ರದ ಹಿಂದೆ ಬಿದ್ದು ಕಾಣೆಯಾಗಿದ್ದಾಳೆ ಎನ್ನುವುದು ದೊಡ್ಡ ಸುದ್ದಿಯಾಗಿತ್ತು. ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಬಾಲಕಿ 78 ದಿನಗಳ ಬಳಿಕ ಪತ್ತೆಯಾಗಿದ್ದಾಳೆ.
2 ತಿಂಗಳ ಹಿಂದೆ ಕಾಣೆಯಾಗಿದ್ದ ಬಾಲಕಿಯನ್ನ ಪೊಲೀಸರು ಎರಡು ತಿಂಗಳ ಬಳಿಕ ಪತ್ತೆ ಹಚ್ಚಿದ್ದಾರೆ. ಗುಜರಾತ್ ನ ಸೂರತ್ ಆಶ್ರಮವೊಂದರಲ್ಲಿ ತಂಗಿದ್ದ ಬಾಲಕಿಯನ್ನ ಸುಬ್ರಮಣ್ಯಪುರ ಪೊಲೀಸರು ಪತ್ತೆ ಹಚ್ಚಿ ಮತ್ತೆ ಪೋಷಕರಿಗೆ ಒಪ್ಪಿಸಿದ್ದಾರೆ.
ಆತ್ಮಗಳ ಜೊತೆ ಮಾತನಾಡುವ ಶಮನಿಸಂ ತಂತ್ರದ ಕುರಿತು ಆಸಕ್ತಿ ಹೊಂದಿದ ಬಾಲಕಿ ಅದನ್ನ ಕಲಿಯಲು ಮನೆ ಬಿಟ್ಟು ಹೋಗಿದ್ದಾಳೆ ಎಂದು ಪೋಷಕರು ದೂರು ನೀಡಿದ್ದರು. ಆದರೆ ಯುವತಿಗೂ ಮತ್ತು ಪೋಷಕರಿಗೂ ನಡುವೆ ಇದ್ದ ಅಸಮಧಾನದಿಂದಾಗಿ ಮನೆ ಬಿಟ್ಟು ಹೋಗಿದ್ದಾಳೆ ಎಂದು ತಿಳಿದು ಬಂದಿದೆ.
ನನ್ನನ್ನ ಬೇರೆ ಶಾಲೆಗೆ ಸೇರಿಸಿ ಎಂದರೂ ತಂದೆ ಸೇರಸಲಿಲ್ಲ ಇದೇ ಬೇಸರದಿಂದ ಮನೆಯಿಂದ 2500 ತೆಗೆದುಕೊಂಡು ಎರಡು ಜೊತೆ ಬಟ್ಟೆ ತೆಗೆದುಕೊಂಡು ಕಣ್ಮರೆಯಾಗಿದ್ದಾಳೆ. ನಾನು ಮನೆ ಬಿಡಲು ತಮದೆ ಜೊತೆ ನಡೆದ ವೈಮನಸ್ಯವೇ ಕಾರಣ ತಿಳಿಸಿದ್ದಾಳೆ.







