ಕ್ರಿಕೆಟ್ ಜಗತ್ತಿನಲ್ಲಿ ಈಗ ವೈಭವ್‍ನ ವೈಭವದ ಆಟ ಪ್ರಜ್ವಲಿಸುತ್ತಿದೆ. ವಂಡರ್ ಬಾಯ್ ವೈಭಯ್ ಸೂರ್ಯವಂಶಿ ಕ್ರಿಕೆಟ್ ಜನಕರ ನಾಡಿನಲ್ಲಿ ಜೋರಾಗಿಯೇ ಸೌಂಡ್ ಮಾಡುತ್ತಿದ್ದಾನೆ. ಹೊಡಿಬಡಿ ಆಟವನ್ನೇ ಬಂಡವಾಳವನ್ನಾಗಿಸಿಕೊಂಡ ವೈಭವ್ ಯುವ ಬೌಲರ್‍ಗಳ ಬೆವರಿಳಿಸುತ್ತಿದ್ದಾನೆ. ಐಪಿಎಲ್‍ನಲ್ಲಿ ಸೀನಿಯರ್ ಬೌಲರ್‍ಗಳನ್ನು ದಂಗುಬಡಿಸಿರುವ ವೈಭವ್‍ನ ಭರ್ಜರಿ ಆಟಕ್ಕೆ ಇಂಗ್ಲೀಷ್ ಯುವ ಬೌಲರ್‍ಗಳು ಮಕಾಡೆ ಮಲಗಿದ್ದಾರೆ.
19 ವಯೋಮಿತಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಭರ್ಜರಿ ಅರ್ಧಶತಕ ದಾಖಲಿಸಿದ್ದಾರೆ. ಮಳೆಯ ಅಡೆತಡೆಯ ನಡುವೆ ನಡೆದ ಪಂದ್ಯದಲ್ಲಿ ವೈಭವ್ 20 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದಾರೆ. ಆದ್ರೆ ರಿಷಬ್ ಪಂತ್ ದಾಖಲೆಯನ್ನು ಅಳಿಸಿ ಹಾಕಲು ಸಾಧ್ಯವಾಗಲಿಲ್ಲ. 19 ವಯೋಮಿತಿಯಲ್ಲಿ 2016ರಲ್ಲಿ ರಿಷಬ್ ಪಂತ್ ನೇಪಾಳ ವಿರುದ್ಧ ಜಸ್ಟ್ 18 ಎಸೆತಗಳಲ್ಲಿ 50 ರನ್ ಸಿಡಿಸಿ ಭಾರತದ ಪರ ವೇಗದ ಅರ್ಧಶತಕ ಸಿಡಿಸಿದ್ದ.
ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ 31 ಎಸೆತಗಳಲ್ಲಿ 277 ಸ್ಟ್ರೈಕ್ ರೇಟ್‍ನಲ್ಲಿ 86 ರನ್ ಗಳಿಸಿದ್ದರು. ಇದರಲ್ಲಿ 9 ಸಿಕ್ಸರ್ ಹಾಗೂ 6 ಬೌಂಡರಿಗಳು ವೈಭವ್ ಬ್ಯಾಟ್‍ನಿಂದ ಹೊರಹೊಮ್ಮಿದ್ದವು. ಅಲ್ಲದೆ ಈ ಪಂದ್ಯವನ್ನು ಭಾರತ 19 ವಯೋಮಿತಿ ತಂಡ ನಾಲ್ಕು ವಿಕೆಟ್‍ಗಳಿಂದ ಗೆದ್ದು ಕೊಂಡು ಐದು ಪಂದ್ಯಗಳ ಸರಣಿಯಲ್ಲಿ 2-1ರಿಂದ ಮುನ್ನಡೆ ಕಾಯ್ದುಕೊಂಡಿದೆ.
ಈ ಹಿಂದೆ ಸೌತ್ ಆಫ್ರಿಕಾದ ಸ್ಟೀವ್ ಸ್ಟೋಲ್ಕ್ ಸ್ಕಾಟ್‍ಲೆಂಡ್ ವಿರುದ್ಧ 13 ಎಸೆತಗಳಲ್ಲಿ 50 ರನ್ ಸಿಡಿಸಿ 19 ವಯೋಮಿತಿ ಪಂದ್ಯಗಳಲ್ಲಿ ದಾಖಲೆ ಬರೆದಿದ್ದರು. ಇಂಗ್ಲೆಂಡ್ ವಿರುದ್ಧದ 19 ವಯೋಮಿತಿ ಸರಣಿಯಲ್ಲಿ ವೈಭವ್ ಭಾರತದ ಪರ ಗರಿಷ್ಠ ರನ್ ಪೇರಿಸಿದ್ದ ಹಿರಿಮೆಗೆ ಪಾತ್ರನಾಗಿದ್ದಾನೆ. ಮೊದಲ ಪಂದ್ಯದಲ್ಲಿ 19 ಎಸೆತಗಳಲ್ಲಿ 48 ರನ್, ಎರಡನೇ ಪಂದ್ಯದಲ್ಲಿ 34 ಎಸೆತಗಳಲ್ಲಿ 45 ರನ್ ಹಾಗೂ ಮೂರನೇ ಪಂದ್ಯದಲ್ಲಿ 31 ಎಸೆತಗಳಲ್ಲಿ 86ರನ್ ಗಳಿಸಿ ಒಟ್ಟು 179 ರನ್ ಕಲೆ ಹಾಕಿದ್ದಾನೆ. ಅಲ್ಲದೆ ಟೂರ್ನಿಯಲ್ಲಿ ಗರಿಷ್ಠ ರನ್ ಪೇರಿಸಿದ್ದ ಎರಡನೇ ಆಟಗಾರನಾಗಿದ್ದಾನೆ. ಮೂರು ಪಂದ್ಯಗಳಲ್ಲಿ ವೈಭವ್ 60ರ ಸರಾಸರಿ ಹಾಗೂ 213 ಸ್ಟೈಕ್ ರೇಟ್ ಹೊಂದಿದ್ದಾನೆ. ಒಟ್ಟಿನಲ್ಲಿ ವೈಭವ್ ಸೂರ್ಯವಂಶಿ ಸದ್ಯದಲ್ಲಿ ಟೀಮ್ ಇಂಡಿಯಾದ ಗರ್ಭಗುಡಿ ಪ್ರವೇಶಿಸುವುದು ಬಹುತೇಕ ಖಚಿತವಾದಂತಿದೆ.








