ಬೆಂಗಳೂರು: ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಕರ್ನಾಟಕದಿಂದ ಈ ಬಾರಿ ವಿಜಯನಗರ ಸಾಮ್ರಾಜ್ಯದ ಕಲೆ, ಶ್ರೀಮಂತಿಕೆ ಬಿಂಬಿಸುವ ಸ್ತಬ್ದಚಿತ್ರದ ಪ್ರದರ್ಶನ ನಡೆಯಲಿದೆ.
ಪಂಡಿತ್ ದೈವಜ್ಞ ಪ್ರಧಾನ ತಾಂತ್ರಿಕ್ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564
ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)call/WhatsApp 8548998564
ಸ್ತಬ್ದ ಚಿತ್ರದಲ್ಲಿ ಕೊಪ್ಪಳದ ಅಂಜನಾದ್ರಿ ಬೆಟ್ಟ, ಶ್ರೀಕೃಷ್ಣದೇವರಾಯನ ಪಟ್ಟಾಭಿಷೇಕ, ಹಜಾರರಾಮ ದೇವಸ್ಥಾನ ಹಾಗೂ ಉಗ್ರ ನರಸಿಂಹನ ಕಲಾಕೃತಿಗಳು ನೋಡುಗರ ಕಣ್ಮನ ಸೆಳೆಯಲಿದ್ದು, ವಿಜಯನಗರ ಸಾಮ್ರಾಜ್ಯದ ವೈಭವವನ್ನು ಮತ್ತೊಮ್ಮೆ ಮರುಕಳಿಸಲಿದೆ. ಈಗಾಗಲೇ ಪಥಸಂಚಲನದ ಪ್ರಾಯೋಗಿಕವಾಗಿ ಮೆರವಣಿಗೆ ನಡೆಸಲಾಗಿದೆ.
ಹಂಪಿಯ ಕೇಂದ್ರಬಿಂದು ಎನಿಸಿರುವ ಉಗ್ರ ನರಸಿಂಹ, ಭಗವಾನ್ ಹನುಮನ ಜನ್ಮಸ್ಥಳ ಎಂದು ಹೇಳಲಾದ ಅಂಜನಾದ್ರಿ ಬೆಟ್ಟ, ವಿಜಯನಗರ ಸಾಮ್ರಾಜ್ಯದ ಸರ್ವಶ್ರೇಷ್ಠ ಸಾಮ್ರಾಟ ಶ್ರೀಕೃಷ್ಣದೇವರಾಯರ 1509 ರಲ್ಲಿ ನಡೆದ ಪಟ್ಟಾಭಿಷೇಕ ಸಮಾರಂಭ ಹಾಗೂ ಹಜಾರರಾಮ ದೇವಾಲಯದ ಭಿತ್ತಿಚಿತ್ರಗಳನ್ನು ಈ ಸ್ತಬ್ದಚಿತ್ರವು ಬಿಂಬಿಸುತ್ತವೆ.
ಪ್ರಾಸಂಗಿಕವೋ ಎಂಬಂತೆ ಬಳ್ಳಾರಿ ಜಿಲ್ಲೆಯಿಂದ ವಿಭಜನೆಗೊಂಡು ವಿಜಯನಗರವು ರಾಜ್ಯದ 31ನೇ ಜಿಲ್ಲೆಯಾಗಿ ರಚನೆಯಾಗಿದೆ. ಕಳೆದ ವರ್ಷದ ಡಿಸೆಂಬರ್ 2020ರಲ್ಲಿ ಕರ್ನಾಟಕ ಸರ್ಕಾರದಿಂದ ವಿಜಯನಗರ ಜಿಲ್ಲೆ ರಚನೆ ಮಾಡಿ ಆದೇಶ ಹೊರಡಿಸಿದೆ. ಇದೇ ಸಂದರ್ಭದಲ್ಲೇ ವಿಜಯನಗರ ಸಾಮ್ರಾಜ್ಯದ ವೈಭವ ಸಾರುವ ಸ್ತಬ್ದ ಚಿತ್ರದ ಪ್ರದರ್ಶನೆ ನಡೆಯುತ್ತಿರುವುದು ವಿಶೇಷ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಟಿಪ್ಪು ಸುಲ್ತಾನರ ಸ್ತಬ್ದಚಿತ್ರದ ಪ್ರದರ್ಶನ ನಡೆದಿತ್ತು.
ರಾಜಧಾನಿ ವಿಜಯನಗರದ ವೈಭವ
ವಿಜಯದ ನಗರ ಕರ್ನಾಟಕದ ಡೆಕ್ಕನ್ ಪ್ರಸ್ಥಭೂಮಿಯ ತುಂಗಭದ್ರಾ ನದಿಯ ದಡದಲ್ಲಿ ಪ್ರವರ್ಧಮಾನಕ್ಕೆ ಬಂದ ವಿಜಯನಗರ ಸಾಮ್ರಾಜ್ಯದ ರಾಜಧಾನಿ ವಿಜಯನಗರ. ಸಂಗಮ ರಾಜವಂಶದ ಹರಿಹರ-1 ಮತ್ತು ಬುಕ್ಕರಾಯ-1 ಇಬ್ಬರು ಸೋದರರು ಈ ಸಾಮ್ರಾಜ್ಯವನ್ನು ಸ್ಥಾಪಿಸಿದರು. ಸಂಗಮ ವಂಶದವರು ತಮ್ಮ ಆಡಳಿತದ ಉತ್ತುಂಗದ ಅವಧಿಯಲ್ಲಿ ದಕ್ಷಿಣ ಭಾರತದ ಬಹುತೇಕ ಕುಟುಂಬಗಳು ಹಾಗೂ ಡೆಕ್ಕನ್ ಪ್ರಾಂತ್ಯದ ಸುಲ್ತಾನರನ್ನು ತಮ್ಮ ಅಧೀನಕ್ಕೆ ತೆಗೆದುಕೊಂಡಿದ್ದರು.
ದಕ್ಷಿಣ ಭಾರತದ ಎಲ್ಲೆಡೆ ಬಹುತೇಕ ಸ್ಮಾರಕಗಳಿರುವ, ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕøತಿಕ ಸಂಸ್ಥೆ (ಯುನೆಸ್ಕೋ) ವತಿಯಿಂದ ವಿಶ್ವ ಪರಂಪರೆಯ ಸ್ಥಳ ಎಂದು ಗುರುತಿಸಲ್ಪಟ್ಟಿರುವ, ಅತ್ಯಂತ ಪ್ರಸಿದ್ಧವಾದ ಹಾಗೂ ಇದೀಗ ಅವಶೇಷಗಳ ತಾಣವಾಗಿರುವ ಹಂಪಿ ಈ ಸಾಮ್ರಾಜ್ಯದ ಪರಂಪರೆಯಾಗಿದೆ.
ಐರೋಪ್ಯ ಹಾಗೂ ಪರ್ಷಿಯಾ ಪ್ರವಾಸಿಗರ ಕಥನಗಳು ಹಾಗೂ ಪುರಾತತ್ವ ಉತ್ಪನನಗಳು ವಿಜಯನಗರ ಸಾಮ್ರಾಜ್ಯದ ಶಕ್ತಿ ಮತ್ತು ಶ್ರೀಮಂತಿಕೆಯನ್ನು ಬಹಿರಂಗಪಡಿಸುತ್ತವೆ.
ಎಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..? ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಪರಿಹಾರ ಶತಸಿದ್ಧ.ವಿದ್ವಾನ್ ಶ್ರೀ ಜ್ಞಾನೇಶ್ವರ್ ರಾವ್ ಕರೆ ಮಾಡಿ 8548998564.
ಪರ್ಷಿಯಾ ಮತ್ತು ಪೋರ್ಚುಗಲ್‌ನಿಂದ ವ್ಯಾಪಾರಸ್ಥರನ್ನು ಆಕರ್ಷಿಸುತ್ತಿದ್ದ ಹಂಪಿ-ವಿಜಯನಗರವು, 1500 ನೇ ಇಸವಿಯಲ್ಲಿ ಬೀಜಿಂಗ್‍ನ ನಂತರ, ವಿಶ್ವದ ಅತೀ ದೊಡ್ಡ ಹಾಗೂ ಭಾರತದ ಅತ್ಯಂತ ಸಿರಿವಂತ ಮಧ್ಯ ಕಾಲೀನ ಯುಗದ ನಗರಿಯಾಗಿತ್ತು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel