1.40 ಲಕ್ಷ ಕೋಟಿ ತಲುಪಿದ ಆಗಸ್ಟ್ ತಿಂಗಳ GST ಆದಾಯ…
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆದಾಯವು ಆಗಸ್ಟ್ ತಿಂಗಳಲ್ಲಿ ವರ್ಷದಿಂದ ವರ್ಷಕ್ಕೆ 28% ರಷ್ಟು ಏರಿಕೆಯಾಗಿ 1,43,612 ಕೋಟಿ ರೂಗಳಿಗೆ ತಲುಪಿದೆ. ದೃಢವಾದ ಆರ್ಥಿಕ ಚೇತರಿಕೆಯಿಂದಾಗಿ ಸತತ ಆರು ತಿಂಗಳು 1.40 ಲಕ್ಷ ಕೋಟಿ ಆದಾಯವನ್ನ ತಲುಪಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.
ಆಗಸ್ಟ್ 2021 ಜಿ ಎಸ್ ಟಿ ಆದಾಯವು 1,12,020 ಕೋಟಿ ರೂಗಳಾಗಿದ್ದು 2022 GST ಆದಾಯಕ್ಕೆ ಹೋಲಿಸಿದರೆ 28% ಹೆಚ್ಚಾಗಿದೆ. ಈ ತಿಂಗಳ ಅವಧಿಯಲ್ಲಿ, ಸರಕುಗಳ ಆಮದು ಆದಾಯ 57% ಹೆಚ್ಚಾಗಿದೆ. ದೇಶೀಯ ವಹಿವಾಟಿನಿಂದ (ಸೇವೆಗಳ ಆಮದು ಸೇರಿದಂತೆ) ಆದಾಯ ಕಳೆದ ವರ್ಷದ ಇದೇ ತಿಂಗಳಿನಲ್ಲಿ ಈ ಮೂಲಗಳಿಂದ ಬಂದ ಆದಾಯಕ್ಕಿಂತ 19% ಹೆಚ್ಚಾಗಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಸತತ ಆರು ತಿಂಗಳಿನಿಂದ ಮಾಸಿಕ ಜಿಎಸ್‌ಟಿ ಆದಾಯ 1.40 ಲಕ್ಷ ಕೋಟಿಗಿಂತ ಹೆಚ್ಚಿದೆ ಎಂದು ಸಚಿವಾಲಯ ತಿಳಿಸಿದೆ. ಆಗಸ್ಟ್‌ನಲ್ಲಿ ಸಂಗ್ರಹವಾದ ಒಟ್ಟು ಜಿಎಸ್‌ಟಿ ಆದಾಯ ರೂ 1,43,612 ಕೋಟಿಗಳಾಗಿದ್ದು, ಇದರಲ್ಲಿ ಕೇಂದ್ರೀಯ ಜಿಎಸ್‌ಟಿ (ಸಿಜಿಎಸ್‌ಟಿ) 24,710 ಕೋಟಿ ರೂ, ರಾಜ್ಯ ಜಿಎಸ್‌ಟಿ 30,951 ಕೋಟಿ ರೂ, ಸಮಗ್ರ ಜಿಎಸ್‌ಟಿ 77,782 ಕೋಟಿರೂ, ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 42,067 ಕೋಟಿ ರೂ, ಮತ್ತು ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 1,018 ಕೋಟಿ ಸೇರಿದಂತೆ 10,168 ಕೋಟಿ ಸೆಸ್ ಆಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.








