ಆನೇಕಲ್ : ರಾಜ್ಯ ಸರ್ಕಾರಕ್ಕೆ ಕ್ವಾರಂಟೈನ್ ನಲ್ಲಿರುವವರಿಗೆ ಸರಿಯಾದ ಊಟ ಕೊಡುವ ಯೋಗ್ಯತೆ ಇಲ್ಲ ಎಂದು ಸಂಸದ ಡಿ.ಕೆ ಸುರೇಶ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಆನೇಕಲ್ ನ ಕಾಡು ಜಕ್ಕನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ವೈರಸ್ ಹರಡದಂತೆ ತಡೆಯಲು ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸರ್ಕಾರದ ಬಳಿ ಕೋವಿಡ್-19 ತಡೆಗಟ್ಟಲು ಬೆಡ್ಡು, ದುಡ್ಡು, ಸ್ಟಾಪ್ ಮತ್ತು ಆಸ್ಪತ್ರೆಗಳು ಇಲ್ಲ. ಕೋವಿಡ್ ಆಸ್ಪತ್ರೆ ಕ್ವಾರಂಟೈನ್ ನಲ್ಲಿರೋರಿಗೆ ಸರಿಯಾದ ಊಟ ಕೊಡುವ ಯೋಗ್ಯತೆ ಈ ಸರ್ಕಾರಕ್ಕೆ ಇಲ್ಲ. ಇದು ಜವಾಬ್ದಾರಿ ಇಲ್ಲದ ಸರ್ಕಾರ. ಬೇಜವಾಬ್ದಾರಿ ಉತ್ತರ ನೀಡಿಕೊಂಡೇ ಕಾಲ ಕಳೆಯುತ್ತಿದ್ದಾರೆ. ಈ ಸರ್ಕಾರ ಮಾಧ್ಯಮಗಳಲ್ಲಿ ಜನರನ್ನು ನಂಬಿಸುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.
ಮುಂದುವರಿದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸುರೇಶ್, ಸದ್ಯ ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಬಂದವರು ರೋಡಿನಲ್ಲಿ ನಿಲ್ಲುವಂತ ಪರಿಸ್ಥಿತಿ ಬಂದಿದೆ. ಪಾಸಿಟಿವ್ ಬಂದವರನ್ನು ಚಿಕಿತ್ಸೆಗೆ ದಾಖಲಿಸಿಕೊಳ್ಳದೆ ರೋಗದ ಲಕ್ಷಣಗಲಿಲ್ಲ ಎಂದು ಸರ್ಕಾರ ಹೇಳುತ್ತಿದೆ ಎಂದು ಆರೋಪಿಸಿದ ಅವರು, ಕೇವಲ ಪ್ರಚಾರಕ್ಕಾಗಿ ಮೀಡಿಯಾ ಮುಂದೆ ಮಾತನಾಡುತ್ತಾರೆ. ಆಸ್ಪತ್ರೆಗಳಲ್ಲಿ ರೋಗಿಗಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಆಸ್ಪತ್ರೆಯ ಟಾಯ್ಲೆಟ್ ಶುಚಿಗೊಳಿಸಲು ಇವರ ಬಳಿ ಸಿಬ್ಬಂದಿಯಿಲ್ಲ ಎಂದು ದೂರಿದರು.








