ಬೆಂಗಳೂರು: ಹಾಲಿನ (Milk) ದರ ಏರಿಕೆಯ ಪ್ರಸ್ತಾವನೆ ಬಂದಿದ್ದು, ಸಂಕ್ರಾಂತಿ ನಂತರ ಹಾಲಿನ ದರದ ಪರಿಷ್ಕರಣೆಯ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೆಎಂಎಫ್ (KMF) ಅಧ್ಯಕ್ಷ ಭೀಮಾನಾಯ್ಕ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ನಡೆದ ಹಾಲಿನ ಒಕ್ಕೂಟದ ಸಭೆಯಲ್ಲಿ ಪ್ರತಿ ಲೀಟರ್ ಹಾಲಿಗೆ 5 ರೂ. ದರ ಏರಿಕೆಗೆ ಪ್ರಸ್ತಾವನೆ ಬಂದಿದೆ. ಈ ಕುಪರಿತು ನಾವು ಪರಿಶೀಲಿಸುತ್ತೇವೆ. ನಂದಿನಿ ಹಾಲಿನಲ್ಲಿ 50 ಎಂಎಲ್ ಹೆಚ್ಚುವರಿ ನೀಡಿ, 2 ರೂ. ಹೆಚ್ಚಳ ಮಾಡಲಾಗಿತ್ತು. ಈ ಹೆಚ್ಚುವರಿ ಹಾಲು ವಾಪಸ್‍ಗೆ ನಿರ್ಧಾರ ಮಾಡಲಾಗಿದೆ ಎಂದು ಹೇಳಿದ್ದಾರೆ.
ಐದು ವರ್ಷದಲ್ಲಿ ಏಕಾಏಕಿ ಹಾಲಿನ ಉತ್ಪಾದನೆ ಹೆಚ್ಚಾಗಿತ್ತು. ಹೀಗಾಗಿ ಕೆಎಂಎಫ್ 50 ಎಂಎಲ್ ಹಾಲನ್ನು ಹೆಚ್ಚುವರಿಯಾಗಿ ಸೇರಿಸಿ 2 ರೂ. ಹೆಚ್ಚು ಮಾಡಿತ್ತು. ಈಗ ಹಾಲಿನ ಉತ್ಪಾದನೆ ಯಥಾಸ್ಥಿತಿಗೆ ಬಂದಿದೆ ಎಂದಿದ್ದಾರೆ.
ಇಡೀ ಬೆಂಗಳೂರು ನಗರದಲ್ಲಿ ಇಡ್ಲಿ ದೋಸೆ ಹಿಟ್ಟು ನೀಡಿದ್ದೇವೆ. ಖಾಸಗಿಯವರು ದೋಸೆ ಹಿಟ್ಟು/ಇಡ್ಲಿ ಹಿಟ್ಟು ಎಷ್ಟು ಮಾರ್ಕೆಟಿಂಗ್ ಮಾಡ್ತಾರೋ ಅದರ 20% ನಷ್ಟು ನಾವು ನೀಡುತ್ತೇವೆ ಎಂದಿದ್ದಾರೆ.