ರಾಜ್ಯಪಾಲರು ತಮ್ಮ ಸ್ವಂತ ಮಗಳಂತೆ ನನ್ನ ಮಾತುಗಳನ್ನು ಆಲಿಸಿದರು – ಕಂಗನಾ ರಣಾವತ್
ಮುಂಬೈ, ಸೆಪ್ಟೆಂಬರ್13: ನಟಿ ಕಂಗನಾ ರಣಾವತ್ ಮಹಾರಾಷ್ಟ್ರ ರಾಜ್ಯಪಾಲ ಕೋಶಿಯಾರಿ ಅವರನ್ನು ರಾಜಭವನದಲ್ಲಿ ಭೇಟಿಯಾಗಿದ್ದಾರೆ.
ಮಹಾರಾಷ್ಟ್ರದ ಆಡಳಿತಾರೂಢ ಪಕ್ಷ ಶಿವಸೇನೆಯಿಂದ ತೊಂದರೆಗೆ ಸಿಲುಕಿರುವ ನಟಿ ಕಂಗನಾ ರಣಾವತ್ ಭಾನುವಾರ ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರನ್ನು ಭೇಟಿಯಾಗಿ ತನಗೆ ಆಗಿರುವ ಅನ್ಯಾಯದ ಬಗ್ಗೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ಸಹೋದರಿ ರಂಗೋಲಿ ಕೂಡ ಉಪಸ್ಥಿತರಿದ್ದರು. ಶಿವಸೇನೆ ಆಳ್ವಿಕೆಯ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಉಪನಗರ ಬಾಂದ್ರಾದ ಪಾಲಿ ಹಿಲ್‌ನಲ್ಲಿರುವ ಕಂಗನಾ ಅವರ ಕಛೇರಿಯನ್ನು ಅಕ್ರಮ ಕಟ್ಟಡವೆಂದು ಭಾಗಶಃ ಕೆಡವಿದ ಕೆಲ ದಿನಗಳ ನಂತರ ಈ ಮಹತ್ವದ ಭೇಟಿ ನಡೆದಿದೆ.
ರಾಜ್ಯಪಾಲರ ಜೊತೆಗೆ 45 ನಿಮಿಷಗಳ ಕಾಲ ನಡೆದ ಮಾತುಕತೆಯ ನಂತರ, ಮಾತನಾಡಿದ ನಟಿ ಕಂಗನಾ ನನಗೆ ಆಗಿರುವ ಅನ್ಯಾಯದ ಬಗ್ಗೆ ಅವರಿಗೆ ತಿಳಿಸಿದ್ದೇನೆ.
ಹೆಣ್ಣು ಮಕ್ಕಳು ಸೇರಿದಂತೆ ಎಲ್ಲಾ ನಾಗರಿಕರ ನಂಬಿಕೆಯನ್ನು ವ್ಯವಸ್ಥೆಯಲ್ಲಿ ಪುನಃಸ್ಥಾಪಿಸಲು ನನಗೆ ನ್ಯಾಯ ದೊರಕುತ್ತದೆ ಎಂದು ನಾನು ಭಾವಿಸುತ್ತೇನೆ. ರಾಜ್ಯಪಾಲರು ತಮ್ಮ ಸ್ವಂತ ಮಗಳಂತೆ ನನ್ನ ಮಾತುಗಳನ್ನು ಕೇಳಿರುವುದು ನನ್ನ ಅದೃಷ್ಟ ಎಂದು ಪ್ರತಿಕ್ರಿಯೆ ನೀಡಿದರು.
ಮೂವಿ ಮಾಫಿಯಾ ಗಿಂತ ಮುಂಬೈ ಪೊಲೀಸರ ಭಯವಿದೆ ಮತ್ತು ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಎಂದು ನಟಿ ಕಂಗನಾ ಹೋಲಿಸಿದ ಬಳಿಕ ಶಿವಸೇನಾ ಮತ್ತು ಕಂಗನಾ ನಡುವೆ ಸಂಘರ್ಷ ಪ್ರಾರಂಭವಾಯಿತು.
https://twitter.com/SaakshaTv/status/1305122992708485120?s=19








