ರಾಜ್ಯ ಚುನಾವಣಾ ಆಯೋಗಕ್ಕೆ ಸವಾಲಾಗಿರುವ ಗ್ರಾಮ ಪಂಚಾಯತ್ ಚುನಾವಣೆ
ಕೋವಿಡ್ ಸೋಂಕಿನ ನಡುವೆಯೂ ನವೆಂಬರ್ ಮೊದಲ ವಾರ ಗ್ರಾಮ ಪಂಚಾಯತ್ ಚುನಾವಣೆ ನಡೆಯುವ ಸಾದ್ಯತೆಗಳಿವೆ. ಈಗಾಗಲೇ ಗ್ರಾಮ ಪಂಚಾಯತ್ ಚುನಾವಣೆಗೆ ಸಿದ್ಧತೆಗಳು ಆರಂಭವಾಗಿವೆ.
ರಾಜ್ಯ ಚುನಾವಣಾ ಆಯೋಗಕ್ಕೆ ಸವಾಲಾಗಿರುವ ಗ್ರಾಮ ಪಂಚಾಯತ್ ಚುನಾವಣೆಗೆ ವೇದಿಕೆ ಕಲ್ಪಿಸಬೇಕಿದೆ. ಈಗಾಗಲೇ ಚುನಾವಣಾ ಆಯೋಗ 6,024 ಗ್ರಾಮ ಪಂಚಾಯಿತಿಗಳ ಸಾವಿರಾರು ಮೀಸಲು ವಾರ್ಡ್‍ಗಳನ್ನು ನಿಗದಿ ಪಡಿಸಿದ್ದು, ಅಂತಿಮ ಅಧಿ ಸೂಚನೆಯನ್ನು ಹೊರಡಿಸಲು ಚಿಂತನೆ ನಡೆಸುತ್ತಿದೆ. ರಾಜ್ಯದಲ್ಲಿ ಸದ್ಯ ಕೋವಿಡ್ ಸೋಂಕು ಹೆಚ್ಚಳವಾಗುತ್ತಿದೆ. ಇನ್ನೂ ಕೂಡ ಕಂಟ್ರೋಲ್‍ಗೆ ಬಂದಿಲ್ಲ. ಹೀಗಾಗಿ ಈ ಸಂದರ್ಭದಲ್ಲಿ ಚುನಾವಣೆ ನಡೆಸಿದ್ರ ಸೋಂಕು ಇನ್ನೂ ಹೆಚ್ಚಳವಾಗಬಹುದು ಅನ್ನೋ ಆತಂಕವೂ ಚುನಾವಣಾ ಆಯೋಗದ ಮುಂದಿದೆ. ಇನ್ನೊಂದೆಡೆ ಚುನಾವಣೆಗೆ ಸಂಬಂಧಪಟ್ಟ ಸಿಬ್ಬಂದಿಗಳ ಕೊರತೆ ಕೂಡ ಎದುರಾಗುವ ಸಾಧ್ಯತೆಗಳಿವೆ.
ಸಾಮಾಜಿಕ ಅಂತರ ಕಾಯ್ದುಕೊಂಡು, ಕೋವಿಡ್ ಶಿಷ್ಟಚಾರಗಳನ್ನು ಪಾಲಿಸಿಕೊಂಡು ಚುನಾವಣೆ ನಡೆಸುವ ಧೈರ್ಯವೂ ರಾಜ್ಯ ಚುನಾವಣಾ ಆಯೋಗಕ್ಕಿಲ್ಲ. ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂಬ ಆದೇಶವಿದ್ರೂ ಜನ ಕೇಳುತ್ತಿಲ್ಲ. ಇನ್ನು ಚುನಾವಣೆ ನಡೆಸಿದ್ರೆ ಜನ ಕೇಳ್ತಾರಾ ಅನ್ನೋ ಪ್ರಶ್ನೆ ಕೂಡ ಇದೆ. ಅದೇ ರೀತಿ ಚುನಾವಣೆಗೆ ನಡೆಸಿದ್ರೆ ಬೂತ್ ಗಳಿಗೆ ಬಂದು ಜನ ಮತ ಹಾಕ್ತಾರಾ ? ಹೀಗೆ ಅನೇಕ ಸಮಸ್ಯೆಗಳನ್ನು ಮೆಟ್ಟಿ ನಿಂತು ರಾಜ್ಯ ಚುನಾವಣಾ ಆಯೋಗ ಗ್ರಾಮ ಪಂಚಾಯತ್ ಚುನಾವಣೆಯನ್ನು ನಡೆಸಬೇಕಾಗುತ್ತದೆ.
ಗ್ರಾಮ ಪಂಚಾಯಿತಿ ಸದಸ್ಯರ ಅಧಿಕಾರಾವಧಿ ಐದು ವರ್ಷ. ಈಗಾಗಲೇ ಈ ಅವಧಿ ಮುಗಿದು ಹೋಗಿದೆ. ಕೊರೋನಾ ಸೋಂಕಿನಿಂದ ರಾಜ್ಯ ಚುನಾವಣಾ ಆಯೋಗ ಗ್ರಾಮ ಪಂಚಾಯತ್ ಚುನಾವಣೆಯನ್ನು ಮುಂದೂಡಿತ್ತು. ಇನ್ನು ಕೆಲವರು ಕೋವಿಡ್ ಸೋಂಕಿನ ಅವಾಂತರ ಗೊತ್ತಿದ್ರೂ ರಾಜ್ಯ ಚುನಾವಣಾ ಆಯೋಗದ ನಿಲುವನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ರು. ವಿಚಾರಣೆ ವೇಳೆ ರಾಜ್ಯ ಚುನಾವಣಾ ಆಯೋಗ ಎಲ್ಲ ರೀತಿಯ ಮಾಹಿತಿಯನ್ನು ಹೈಕೋರ್ಟ್‍ಗೆ ಸಲ್ಲಿಸಿದೆ.
ಸದ್ಯ ನವೆಂಬರ್ ಮೊದಲ ವಾರ ಗ್ರಾಮ ಪಂಚಾಯಿತಿಗಳ ಚುನಾವಣೆ ನಡೆಸಲು ಸಿದ್ಧತೆ ನಡೆಸಿಕೊಂಡಿದ್ದು, ಈ ಬಾರಿಯ ಚುನಾವಣೆಗೆ ಆರೋಗ್ಯ ಇಲಾಖೆ ಮತ್ತು ಕಂದಾಯ ಇಲಾಖೆಗಳ ಸಹಾಯವನ್ನು ಪಡೆಯಲು ರಾಜ್ಯ ಚುನಾವಣಾ ಆಯೋಗ ಮುಂದಾಗಿದೆ.
ರಾಜ್ಯದ ಗ್ರಾಮ ಪಂಚಾಯಿತಿ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ಪ್ರತಿ ಜಿಲ್ಲೆಗಳಲ್ಲಿ ಎಸ್‍ಇಪಿ ಸಮಿತಿಗಳನ್ನು ರಚಿಸಿದೆ. ಅಲ್ಲದೆ ಸಾಮಾಜಿಕ ಅಂತರ, ಕೋವಿಡ್ ಮಾರ್ಗಸೂಚಿ ಹಾಗೂ ಜನರನ್ನು ಕೋವಿಡ್ ಸೋಂಕು ಬಗ್ಗೆ ಜಾಗೃತಗೊಳಿಸಿ ಚುನಾವಣೆ ನಡೆಸಬೇಕಾಗದ ಸವಾಲನ್ನು ಹೊಂದಿದೆ.








