ಸ್ವಿಗ್ಗಿ – ಜ್ಯೊಮ್ಯಾಟೋ, ಓಲಾ ಊಬರ್ ಸೇವೆ ಜಿ ಎಸ್ ಟಿ ವ್ಯಾಪ್ತಿಗೆ ತಂದ ಕೇಂದ್ರ….
ಜನವರಿ 1 ರಿಂದ ಜಿಎಸ್ ಟಿ ನಿಯಮಗಳಲ್ಲಿ ಬದಲಾವಣೆಗಳು ಬರಲಿದ್ದು ಇ ಕಾಮರ್ಸ್ ಮೂಲಕ ಊಟ ಉಪಹಾರ ಖರೀದಿಸುವವರಿಗೆ ಮತ್ತು ಸಾರಿಗೆ ಸೇವೆ ಪಡೆಯುವವರಿಗೆ ಹಣಕಾಸು ಸಚಿವಾಲಯ ಶಾಕ್ ನೀಡಿದೆ.
ಆನ್ ಲೈನ್ ಮೂಲಕ ಫುಡ್ ಆರ್ಡರ್ ಮಾಡುವುದಕ್ಕೆ ಇನ್ನುಮುಂದೆ ಜಿ ಎಸ್ ಟಿ ಕಟ್ಟಬೇಕಾಗುತ್ತದೆ ಎಂದು ಜಿ ಎಸ್ ಟಿ ಯಲ್ಲಿ ಬದಲಾಗಿರುವ ನಿಯಮಗಳು ಹೇಳುತ್ತಿವೆ ಇದರಿಂದ ಸ್ವಿಗ್ಗಿ ಜೊಮ್ಯಾಟೋ ಮೂಲಕ ಆರ್ಡರ್ ಮಾಡುವವರಿಗೆ ಪುಡ್ ಸ್ವಲ್ಪ ತುಟ್ಟಿಯಾಗಲಿದೆ.
ಇದರ ಜೊತೆ ಆನ್ ಲೈನ್ ಮೂಲಕ ಸಾರಿಗೆ ಸೇವೆ ಒದಗಿಸುವ ಓಲಾ ಊಬರ್ ಕ್ಯಾಬ್ ಅಟೋ ಸೇವೆಗೆಳು ಸಹ ತೆರಿಗೆ ಪಾವತಿಸುವ ವ್ಯಾಪ್ತಿಗೆ ಬಂದಿವೆ…ಪ್ರಯಾಣ ಮಾಡುವವರು ಜೇಬು ಗಟ್ಟಿ ಮಾಡಿಕೊಂಡು ಆಟೋ, ಟ್ಯಾಕ್ಸಿ ಹತ್ತಬೇಕು. ಆಫ್‌ಲೈನ್/ಮ್ಯಾನ್ಯುವಲ್ ಮೋಡ್ ಮೂಲಕ ಓಡಿಸುವಾ ಆಟೋ ರಿಕ್ಷಾ ಚಾಲಕರಿಗೆ ಇದರಲ್ಲಿ ವಿನಾಯಿತಿ ಇದೆ ಈ ಕಾಮರ್ಸ್ ಫ್ಲಾಟ್ ಫಾರ್ಮ್ ಅವರಿಗೆ ಮಾತ್ರ 5 % ಸುಂಕ ವಿಧಿಸಲಾಗುತ್ತಿದೆ.
ಇದರೊಂದಿಗೆ ಪಾದರಕ್ಷೆಗಳು ಮತ್ತು ಜವಳಿ ಉದ್ಯಮಕ್ಕೂ ಜಿ ಎಸ್ ಟಿ ಶಾಕ್ ತಗುಲಿದೆ.. ಎರಡು ಉದ್ಯಮಗಳಿಗೆ 12% ಜಿ ಎಸ್ ಟಿ ತೆರಿಗೆ ಇರುತ್ತದೆ. ಹತ್ತಿ ಉಡುಪುಗಳಿಗೆ ರಿಯಾಯಿತಿ ಇದೆ.








