ಹಿಜಾಬ್ ಪ್ರಕರಣದಲ್ಲಿ ಕೆಲವೊಂದು ದುಷ್ಟ ಹಿತಾಸಕ್ತಿಗಳ ಕೈವಾಡವಿದೆ: ದೇವೆಗೌಡ Saaksha Tv
ನವದೆಹಲಿ: 2023ರ ವಿಧಾನಸಭೆ ಚುನಾವಣೆಗೋಸ್ಕರ ಹಿಜಾಬ್ ವಿವಾದವನ್ನ ವಿವಿಧ ರಾಜಕೀಯ ಪಕ್ಷಗಳು ಲಾಭಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿವೆ ಎಂದು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರು ಹೇಳಿದ್ದಾರೆ.
ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್ ವಿವಾದ ಈಗಾಗಲೇ ರಾಜಕೀಯ ಬಣ್ಣ ಪಡೆದುಕೊಂಡಿದ್ದು, ಈ ಪ್ರಕರಣ ಈಗಾಗಲೇ ಸಂಸತ್ನಲ್ಲೂ ಚರ್ಚೆಯಾಗಿದೆ. ಈ ಕುರಿತು ಸಂಸತ್ ಅಧಿವೇಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಪ್ರಕರಣದಲ್ಲಿ ಕೆಲವೊಂದು ದುಷ್ಟ ಹಿತಾಸಕ್ತಿಗಳ ಕೈವಾಡವಿದ್ದು, ವಿದ್ಯಾರ್ಥಿಗಳು ಹಾಗೂ ರಾಜಕೀಯ ಪಕ್ಷಗಳನ್ನ ತಪ್ಪು ದಾರಿಗೆ ತೆಗೆದುಕೊಂಡು ಹೋಗುತ್ತಿವೆ ಎಂದು ಪ್ರತಿಕ್ರಿಯೆ ನೀಡಿದರು.
ಕರಾವಳಿಯಲ್ಲಿ ಕಾಣಿಸಿಕೊಂಡಿದ್ದ ಈ ವಿವಾದಕ್ಕೆ ಅಲ್ಲಿನ ರಾಜಕೀಯ ಸಂಘಟನೆವೊಂದು ವಿವಾದದ ಕಿಡಿ ಹೊತ್ತಿಸಿದ್ದು, ಇದೀಗ ವಿವಿಧ ಪಕ್ಷಗಳು ಇದರ ರಾಜಕೀಯ ಲಾಭ ಪಡೆದುಕೊಳ್ಳುತ್ತಿವೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಈ ವಿವಾದವನ್ನ ತಕ್ಷಣವೇ ಹತ್ತಿಕ್ಕಬೇಕು ಎಂದು ಹೇಳಿದರು.