ವೈದ್ಯರ ನಿರ್ಲಕ್ಷ್ಯದಿಂದ ತಾಯಿ ಸಾವು – ಅನಾಥವಾದ ಶಿಶು
ಹೆರಿಗೆ ವೇಳೆ ವೈದ್ಯರ ನಿರ್ಲಕ್ಷ್ಯದಿಂದ ತಾಯಿ ಸಾವನ್ನಪ್ಪಪಿರುವ ಮಗು ಅನಾಥವಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ವೈದ್ಯರ ವಿರುದ್ದ ಕುಟುಂಬಸ್ಥರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ತಾಯಿ ಹಾಗೂ ಮಕ್ಕಳ ಆಸ್ಪತ್ರೆ ಎದುರು ನಡೆದಿದೆ.
ದೊಡ್ಡಬಳ್ಳಾಪುರ ತಾಲೋಕಿನ ಬೈರಾಪುರ ಗ್ರಾಮದ ಸವಿತ ಮೃತ ದುರ್ಧೈವಿ, ಹೆರಿಗೆಗಾಗಿ ತಾಯಿ ಗು ಆಸ್ಪತ್ರೆಯಲ್ಲಿ ದಾಖಲಾಗಿದ್ದ ವೇಳೆ ಅಧಿಕ ರಕ್ತ ಸ್ತ್ರಾವದಿಂದ ಹೆರಿಗೆಯಾದ ಕ್ಷಣದಲ್ಲೇ ತಾಯಿ ಸಾವನ್ನಪ್ಪಿದ್ದಾರೆ.
ಮೃತಳ ಸಾವಿಗೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಪತಿ ಆರೋಪಿಸಿದ್ದಾರೆ, ಹೊಟ್ಟೆಯಲ್ಲಿದ್ದ ಮಗು 4 ಕೆ ಜಿ ತೂಕವಿತ್ತು. ಹೆರಿಗೆ ಮಾಡಿಸುವುದು ಸವಾಲಿನ ಕೆಲಸವಾಗಿತ್ತು. ಆದರೆ ವೈದ್ಯರು ಇಲ್ಲಿಯೆ ಹೆರಿಗೆ ಮಾಡುವುದಾಗಿ ಧೈರ್ಯ ಹೇಳಿ ಕೊನೆಗೆ ಜೀವವನ್ನ ತೆಗೆದಿದ್ದಾರೆ ಎಂದು ಮೃತಳ ಗಂಡ ರಮೇಶ್ ಆರೋಪಿಸಿದ್ದಾರೆ..