ವೈಯಕ್ತಿಕ ದ್ವೇಷಕ್ಕೆ 1300 ಅಡಿಕೆ ಗಿಡಗಳ ನಾಶ – ರೈತ ಕಂಗಾಲು
ಮನಷ್ಯರ ನಡುವಿನ ವೈಯಕ್ತಿಕ ದ್ವೇಷಕ್ಕೆ ಫಸಲಿಗೆ ಬಂದಿದ್ದ ಸಾವಿರಾರು ಗಿಡಗಳು ನೆಲಸಮವಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೋಕಿನಲ್ಲಿ ನಡೆದಿದೆ.
ತಾಲೋಕಿನ ಮಾಡದಕೆರೆ ಹೋಬಳಿಯ ಬೆನಕನ ಹಳ್ಳಿ ರೈತ ರಂಗನಾಥ್ ಎಂಬುವವರಿಗೆ ಸೇರಿದ ಅಡಿಕೆ ಗಿಡಗಳನ್ನ ರಾತ್ರೋ ರಾತ್ರಿ ಕಡಿದುಹಾಕಲಾಗಿದೆ. ರೈತ ರಂಗನಾಥ್ 5 ಎಕರೆ ಹೊಲದಲ್ಲಿ ಈಗಾಗಲೇ ಅಡಿಕೆ ಫಸಲು ಪಡೆಯುತ್ತಿದ್ದಾರೆ. ಒಂದು ವರ್ಷದ ಹಿಂದೆ 2 ಎಕೆರೆಯಲ್ಲಿ ಹೊಸದಾಗಿ ಸಾವಿರ ಅಡಿಕೆ ಗಿಡಗಳನ್ನು ನೆಟ್ಟಿದ್ದರು . ಇನ್ನೊಂದು ಕಡೆ 300 ಗಿಡಗಳು ಫಸಲಿಗೆ ಬರುವ ಹಂತದಲ್ಲಿದ್ದವು.
ಭಾನುವಾರ ಬೆಳಿಗ್ಗೆ ತೋಟಕ್ಕೆ ಹೋದಾಗ ಅಡಿಕೆ ಗಿಡಗಳನ್ನ ಕಡಿದು ಹಾಕಿರುವುದನ್ನ ನೋಡಿದ್ದಾರೆ. ಒಟ್ಟು 1300 ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ಕಡಿದು ಹಾಕಲಾಗಿದೆ. ಕಡಿದು ಹಾಕಿರುವ ಗಿಡಗಳನ್ನ ಕಂಡು ಕಂಗಾಲಾಗಿರುವ ರೈತ ರಂಗನಾಥ್ ಈ ಸಂಬಂಧ ಹೊಸದುರ್ಗ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆಗೆ ಕಾರಣ ತನಿಖೆ ಮೂಲಕ ತಿಳಿಯಬೇಕಿದೆ.








