3 ಗಡಿ ನುಸುಳುಕೋರರನ್ನ ಹೊಡೆದುರುಳಿಸಿದ ಭಾರತೀಯ ಸೇನೆ..
ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಉರಿಯ ಕಮಲ್‌ಕೋಟೆ ಸೆಕ್ಟರ್‌ನ ಮಡಿಯನ್ ನಾನಕ್ ಪೋಸ್ಟ್ ಬಳಿ ಮೂವರು ನುಸುಳುಕೋರರನ್ನ ಹೊಡೆದುರುಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಸೇನೆಯು ಇಬ್ಬರು ಭಯೋತ್ಪಾದಕರ ಸದೆಬಡೆದು ಶವಗಳನ್ನ ವಶಪಡಿಸಿಕೊಂಡ ದಿನ ಈ ಘಟನೆ ನಡೆದಿದೆ.
ಸೋಮವಾರ ನೌಶೇರಾ ಸೆಕ್ಟರ್‌ನಲ್ಲಿ ಎಲ್‌ಒಸಿ ಬಳಿ ನುಸುಳಲು ಪ್ರಯತ್ನಿಸುತ್ತಿದ್ದ ಇಬ್ಬರು ಭಯೋತ್ಪಾದಕರನ್ನ ಸೇನೆ ಹೊಡದುರುಳಿಸಿ ಉಗ್ರರ ಪ್ಲಾನ್ ಗಳನ್ನ ವಿಫಲವಾಗಿಸಿದ್ದರು. ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಭಯೋತ್ಪಾದಕರೊಬ್ಬರು ನೆಲಬಾಂಬ್ ಮೇಲೆ ದಾಳಿ ನಡೆಸಿ ಸ್ಫೋಟಕ್ಕೆ ಕಾರಣರಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಂಡೇಟು ತಿಂದು ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಂಧಿತ ಭಯೋತ್ಪಾದಕನೊಬ್ಬ ನಾಲ್ಕೈದು ಉಗ್ರರ ಜೊತೆ ಸೇರಿಕೊಂಡು ಭಾರತೀಯ ಸೇನೆಯನ್ನ ಗುರಿಯಾಗಿಸಿ ಆತ್ಮಹತ್ಯಾ ದಾಳಿ ನಡೆಸುವ ಕಾರ್ಯಾಚರಣೆಯಲ್ಲಿದ್ದೇ ಎಂದು ಬಹಿರಂಗಪಡಿಸಿದ್ದಾನೆ. ಮಿಷನ್‌ಗಾಗಿ ಪಾಕಿಸ್ತಾನದ ಕರ್ನಲ್ ಯೂನಸ್ ಅವರಿಂದ 30,000 ಪಡೆದಿರುವುದಾಗಿ ಅವರು ಒಪ್ಪಿಕೊಂಡಿದ್ದಾನೆ.








