ವಿದ್ಯುತ್ ಬಲ್ಬ್ ಕಂಡು ಹಿಡಿದವನು ಬಿಳಿ ವರ್ಣೀಯ ಎಡಿಸನ್ ಅಲ್ಲ, ಬದಲಾಗಿ ಕಪ್ಪು ವ್ಯಕ್ತಿ ಲ್ಯಾಟಿಮರ್ – ಬಿಡೆನ್ ಹೊಸ ವ್ಯಾಖ್ಯಾನ
ವಾಷಿಂಗ್ಟನ್, ಸೆಪ್ಟೆಂಬರ್05: ಗುರುವಾರ, ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡನ್, ಎಡಿಸನ್ ಎಂಬ ಬಿಳಿ ವರ್ಣೀಯ ವಿದ್ಯುತ್ ಬಲ್ಬ್ ಅನ್ನು ಕಂಡು ಹಿಡಿದದ್ದು ಅಲ್ಲ ಬದಲಾಗಿ ಒಬ್ಬ ಕಪ್ಪು ವ್ಯಕ್ತಿಯು ಬೆಳಕಿನ ಬಲ್ಬ್ ಅನ್ನು ಕಂಡುಹಿಡಿದಿದ್ದಾನೆ ಎಂದು ಇತಿಹಾಸಕ್ಕೆ ಹೊಸ ವ್ಯಾಖ್ಯಾನ ನೀಡಿದ್ದಾರೆ.
ವಿಸ್ಕಾನ್ಸಿನ್ನ ಕೆನೋಶಾದಲ್ಲಿ ನಡೆದ ಸಮುದಾಯ ಸಭೆಯಲ್ಲಿ ಬಿಡೆನ್ ಹೊಸ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಭೆಯಲ್ಲಿ ಭಾಗವಹಿಸುವ ಮೊದಲು ಬಿಡೆನ್ ಪೊಲೀಸರ ಗುಂಡಿನ ದಾಳಿಗೆ ಒಳಗಾದ ಕಪ್ಪು ವರ್ಣೀಯ ಜಾಕೋಬ್ ಬ್ಲೇಕ್ ಹಾಗೂ ಆತನ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಆಫ್ರಿಕನ್ ಅಮೆರಿಕನ್ ಮತಗಳನ್ನು ಸೆಳೆಯಲು ಅಮೆರಿಕದ ಡೆಮೊಕ್ರೆಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜಾಯ್ ಬಿಡೆನ್ ಇದೀಗ ಹೊಸ ವಿವಾದವೊಂದನ್ನು ಹುಟ್ಟು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.
ನಮಗೆ ತಿಳಿದಂತೆ, ಎಡಿಸನ್ ವಿದ್ಯುತ್ ಬಲ್ಬ್ ಅನ್ನು ಕಂಡುಹಿಡಿದನು, ಆದರೆ ಲೆವಿಸ್ ಲ್ಯಾಟಿಮರ್ ಎಂಬ ಕಪ್ಪು ವರ್ಣಿಯ ಸಂಶೋಧಕನು ಅದು ಉತ್ತಮವಾಗಿ ಕಾರ್ಯ ನಿರ್ವಹಿಸುವಂತೆ ಮತ್ತು ಹೆಚ್ಚು ಕಾಲ ಬೆಳಗಲು ಪ್ರಮುಖ ಪಾತ್ರ ವಹಿಸಿದ್ದಾನೆ ಎಂಬುವುದು ಬಿಡೆನ್ ವಾದ.
ಥಾಮಸ್ ಎಡಿಸನ್ ತೆಳುವಾದ ತಂತುಗಳನ್ನು ಬಿಸಿಮಾಡಲು ವಿದ್ಯುತ್ ಬಳಸಿ ಪ್ರಕಾಶಮಾನವಾದ ವಿದ್ಯುತ್ ಬಲ್ಬ್ ಅನ್ನು ಅಭಿವೃದ್ಧಿಪಡಿಸಿದನು. ಆದರೆ ಹಲವಾರು ವರ್ಷಗಳ ಪ್ರಯೋಗಗಳು ಮತ್ತು ವಿವಿಧ ತಂತು ವಸ್ತುಗಳ ಸಾವಿರಾರು ಪರೀಕ್ಷೆಗಳ ನಂತರ, ಎಡಿಸನ್ ನ ದೀರ್ಘಕಾಲೀನ ವಿದ್ಯುತ್ ಬಲ್ಬ್ ತಂತು ಸುಡುವ ಮೊದಲು ಕೇವಲ 15 ಗಂಟೆಗಳ ಕಾಲ ಮಾತ್ರ ಉಳಿಯುತ್ತಿತ್ತು. ಆ ಸಮಯದಲ್ಲಿ ಎಡಿಸನ್ ತನ್ನ ಬಲ್ಬ್ ಅನ್ನು ಬೇ ಮರ, ಸೀಡರ್, ಬಿದಿರು, ಲ್ಯಾಟಿಮರ್ ಸೇರಿದಂತೆ ಇತರ ನಾರುಗಳ ಕಾರ್ಬೊನೈಸ್ ಮಾಡಿದ ತಂತುಗಳನ್ನು ಬಳಸಿ ಪ್ರಯೋಗಿಸುತ್ತಿದ್ದ. ಎಡಿಸನ್ ಸಮಕಾಲೀನ ಲೂಯಿಸ್ ಲ್ಯಾಟಿಮರ್, ಅಲೆಕ್ಸಾಂಡರ್ ಗ್ರಹಾಂ ಬೆಲ್ ಜೊತೆಗೂಡಿ ದೂರವಾಣಿಯನ್ನು ಕಂಡುಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ.
ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಕಾರ, ಎಡಿಸನ್ ನ ಮೂಲ ವಿನ್ಯಾಸದ ಮೇಲೆ ಲ್ಯಾಟಿಮರ್ ವಿದ್ಯುತ್ ಬಲ್ಬ್ ಬಹುಕಾಲ ಉರಿಯುವಂತಾಗಲು ಫಿಲಾಮೆಂಟ್ ಸಂಶೋಧಿಸಿದ್ದ . ಲ್ಯಾಟಿಮರ್ ಇಂಗಾಲದಿಂದ ಮಾಡಿದ ಹೆಚ್ಚು ಬಾಳಿಕೆ ಬರುವ ತಂತುಗಳೊಂದಿಗೆ ವಿದ್ಯುತ್ ಬಲ್ಬ್ ಅನ್ನು ರಚಿಸಿದ. ಅವರು ಪೇಟೆಂಟ್ ಅನ್ನು ಯುಎಸ್ ಎಲೆಕ್ಟ್ರಿಕ್ ಗೆ 1881 ರಲ್ಲಿ ಮಾರಾಟ ಮಾಡಿದ ಮತ್ತು ಒಂದು ವರ್ಷದ ನಂತರ ಇಂಗಾಲದ ತಂತುಗಳನ್ನು ಸಮರ್ಥವಾಗಿ ತಯಾರಿಸುವ ಪ್ರಕ್ರಿಯೆಗೆ ಪೇಟೆಂಟ್ ಪಡೆದ. ಅವನು 1890 ರಲ್ಲಿ ವಿದ್ಯುತ್ ದೀಪಗಳ ಬಗ್ಗೆ ಒಂದು ಪುಸ್ತಕವನ್ನು ಬರೆದಿರುವುದಾಗಿ ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹೇಳಿದೆ.
ಲ್ಯಾಟಿಮರ್ ನ ಕೊಡುಗೆಗಳಿಂದಾಗಿ, ಪ್ರಕಾಶಮಾನ ಬೆಳಕಿನ ಬಲ್ಬ್ ಗಳು ಹೆಚ್ಚು ಕೈಗೆಟುಕುವ ಮತ್ತು ಪ್ರಾಯೋಗಿಕವಾಗಿ ಮಾರ್ಪಟ್ಟವು ಎಂದು ಎಂಐಟಿ ಹೇಳುತ್ತದೆ. ಹೀಗಾಗಿ ಲ್ಯಾಟಿಮರ್ ಅನ್ನು ಉಪಯೋಗಿಸಿಕೊಂಡು ಡೆಮೊಕ್ರೆಟಿಕ್ ಪಕ್ಷ ಕಪ್ಪು ವರ್ಣೀಯರ ಮತವನ್ನು ಸೆಳೆಯಲು ನೋಡುತ್ತಿದೆ.