ರಾಮನಗರ : ನಾನು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ರೈತರ ಸಾಲಮನ್ನಾ ಮಾಡಿ ರೈತರ ಬೆನ್ನಿಗೆ ನಿಂತ ನಮ್ಮನ್ನು ರಾಜ್ಯದ ಜನತೆ ಕೈ ಹಿಡಿಯಲಿಲ್ಲ. ಈಗಿರುವ ಸರ್ಕಾರ ಕೇವಲ ಭರವಸೆ ನೀಡುವುದಷ್ಟೇ ಒಬ್ಬರಿಗೆ ಒಂದು ಪೈಸೆ ಸಿಗೋದಿಲ್ಲಾ , ಕಷ್ಟಪಟ್ಟು ಸರ್ಕಾರ ರಚನೆ ಮಾಡಿದ್ದಾರೆ ನೋಡೋಣ ಎಷ್ಟು ಕೊಡ್ತಾರೆ ಅಂತಾ, ಪ್ರಕೃತಿ ವಿಕೋಪಕ್ಕೆ ಒಳಗಾದ ರೈತರಿಗೆ ಹೆಚ್ಚು ಪ್ರೋತ್ಸಾಹ ಧನ ನೀಡುವಂತೆ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಚನ್ನಪಟ್ಟಣ ತಾಲ್ಲೂಕಿನ ಗೋವಿಂದಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ ಹಾನಿಗೆ ತುತ್ತಾಗಿ ನೂರ ಐವತ್ತು ಎಕರೆ ಬಾಳೆ, ಜೊತಗೆ ತೆಂಗು ನಾಶವಾಗಿದೆ. ಸ್ಥಳಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಎಕರೆಗೆ ಹತ್ತುಸಾವಿರ ವೈಯುಕ್ತಿಕ ಪರಿಹಾರ ಘೋಷಿಸಿದರು. ಅಲ್ಲದೆ ಪ್ರಕೃತಿ ವಿಕೋಪದಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಅಂತಹ ರೈತರಿಗೆ ವೈಯಕ್ತಿಕವಾಗಿ ಸಹಾಯ ಮಾಡುವುದಾಗಿ ಘೋಷಣೆ ಮಾಡಿದರು. ಜೊತೆಗೆ ರೈತರು ಸಂಕಷ್ಟದಲ್ಲೇ ಬೇಸಾಯ ಮಾಡ್ತಿದ್ದಾರೆ.
ವಿಶೇಷವಾಗಿ ಕಿಡ್ನಿ ವೈಪಲ್ಯಕ್ಕೆ ತುತ್ತಾಗಿದ್ದ ಕುಮಾರ್ ಎಂಬಾತ ಡ್ರೈವರ್ ವೃತ್ತಿ ಸಾಧ್ಯವಾಗದ ಹಿನ್ನೆಲೆ ಲೀಸ್ ಗೆ ಭೂಮಿ ಪಡೆದು ಬಾಳೆ ಬೆಳೆಯಲು ಮುಂದಾಗಿದ್ದರು. ಇದೀಗ ಬೆಳೆ ನಾಶವಾಗಿದೆ. ಒಂದು ಎಕರೆ ಬಾಳೆ ಬೆಳೆಯಲು 80 ಸಾವಿರದಿಂದ ಲಕ್ಷ ಖರ್ಚಾಗುತ್ತೆ. ಪ್ರಕೃತಿ ವಿಕೋಪಕ್ಕೆ ಸರ್ಕಾರ ನೀಡುವ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ ಹಾಗಾಗಿ ಸರ್ಕಾರ ಹೆಚ್ಚು ಪರಿಹಾರ ನೀಡಬೇಕು.
ಆಟೋ ಡ್ರೈವರ್ ಗಳಿಗೆ ಸರ್ಕಾರ 5000 ಪರಿಹಾರ ಘೋಷಣೆ ಮಾಡಿದೆ. ಆದರೆ ಇಲಾಖೆ ಗೆ 20 ಕೋಟಿ ಹಣ ಮಂಜೂರು ಮಾಡಿ ವಿತರಿಸುವಂತೆ ಸೂಚಿಸಿದ್ದಾರೆ. ಸ್ಥಿತಿವಂತ ಆಟೋ ಡ್ರೈವರ್ ಗಳನ್ನು ಗುರುತಿಸಿ ಪರಿಹಾರ ನೀಡುವಂತೆ ಸರ್ಕಾರ ಹೇಳಿದೆ. ಆದರೆ ಆಟೋ ಡ್ರೈವರ್ ಗಳಲ್ಲಿ ಸ್ಥಿತಿವಂತರನ್ನು ಹೇಗೆ ಗುರುತಿಸುತ್ತಾರೆ ಎಂದು ಸರ್ಕಾರ ಸೂಚನೆಯನ್ನು ವ್ಯಂಗ್ಯ ಮಾಡಿದರು. ನಾನು ಸಿಎಂ ಆಗಿದ್ದಾಗ ರೈತರ ಸಾಲಮನ್ನಾ ಮಾಡಿದ್ದೇನೆ. ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.








