The Kashmir ರಕ್ತಸಿಕ್ತ ಚರಿತ್ರೆಯ ರಕ್ತಸಿಕ್ತ ಅಧ್ಯಾಯಗಳು
1947ರಲ್ಲಿ ಭಾರತ ಸ್ವಾತಂತ್ರ್ಯವಾಗುವುದರ ಜೊತೆಗೆ ಭಾರತ ಇಬ್ಬಾಗವಾಯಿತು. ಭಾರತದ ಒಂದು ಭಾಗ ತುಂಡಾಗಿ ಪಾಕಿಸ್ತಾನ ದೇಶ ಸೃಷ್ಟಿಯಾಯಿತು. ಅಂದಿನಿಂದ ಇಂದಿನವರೆಗು ಎರಡು ದೇಶಗಳ ನಡುವೆ ಜಮ್ಮು & ಕಾಶ್ಮೀರದ ನಡುವೆ ಗಲಾಟೆ, ಯುದ್ಧಗಳೇ ನಡೆದಿವೆ. ಈ ಎಲ್ಲದರಲ್ಲು ಪಾಕಿಸ್ತಾನ ಸೋತು ಸುಣ್ಣಾಗಿದೆ. ಪಾಕಿಸ್ತಾನ ನೇರವಾಗಿ ಎದುರಿಸಲು ಸಾಧ್ಯವಾಗದೆ, ಭಾರತದ ಒಳಗೆ ಭಯೋತ್ಪಾದಕರನ್ನು ಕಳುಹಿಸಿ ದೇಶವನ್ನು ಆಂತರಿಕವಾಗಿ ನಾಶ ಮಾಡುವ ಉದ್ದೇಶ.
ಇದಕ್ಕೆ ಉದಾಹರಣೆ ಕಾಶ್ಮೀರದಲ್ಲಿ ನಡೆದ ಕಲ್ಲುತೂರಾಟ, ಕಾಶ್ಮೀರಿ ಪಂಡಿತರ ಮೇಲೆ ಜಿಹಾದಿ ಮುಸ್ಲೀಂರು ನಡೆಸಿದ ಪೈಶಾಚಿಕ ಕೃತ್ಯ ಮನುಕಲಕುವಂತಹದ್ದು. 1989 ರಿಂದ ಪ್ರಾರಂಭವಾದ ಈ ಕೃತ್ಯಕ್ಕೆ ಸಾಕ್ಷಿ ಎಂಬಂತೆ ಮಾರ್ಚ 11 ರಂದು ತೆರೆಕಂಡ “ದಿ ಕಾಶ್ಮೀರ ಫೈಲ್ಸ್” ಇನ್ನೂ ಈ ಚಿತ್ರದಲ್ಲಿ ಸೆನ್ಸಾರ್ ಕಾರಣದಿಂದ ನಗ್ನ ಸತ್ಯಗಳನ್ನು ತೋರಿಸಲು ಸಾಧ್ಯವಾಗಲಿಲ್ಲ.
ಹೌದು ಚಿತ್ರದಲ್ಲಿ ಸಂಪೂರ್ಣ ಸತ್ಯ ತಿಳಿಸಲು ಸಾಧ್ಯವಾಗಲಿಲ್ಲ ಆದರೆ ಈಗ ತಿಳಿಯೋಣ. ಅದು 1989 ಶಾಂತವಾಗಿದ್ದ ಕಾಶ್ಮೀರದಲ್ಲಿ ಇದ್ದಕ್ಕಿದಂತೆ ರಕ್ತದಲ್ಲಿ ಕುದಿಯಲು ಪ್ರಾರಂಭವಾದ ವರ್ಷ. ಕಾರಣ ಜಿಹಾದ ಮುಸ್ಲಿಂ ರು ಕಾಶ್ಮೀರಿ ಪಂಡಿತರ ಮೇಲೆ ಗುಂಡಿನ ದಾಳಿ ನಡೆಸಲು ಪ್ರಾರಂಭಿಸಿದ ವರ್ಷ. ಇವರ ಗುಂಡಿನ ದಾಳಿಗೆ ಮೊದಲು ಬಲಿಯಾದವರು ಟಿಕಾ ಲಾಲ್ ತಾಪ್ಲೂ.
ಟಿಕಾ ಲಾಲ್ ತಾಪ್ಲೂ ಅವರು 6 October 1930 ರಂದು ಜನಿಸುತ್ತಾರೆ. ಇವರು ತಮ್ಮ ಎಮ್ .ಎ, ಎಲ್. ಎಲ್. ಬಿ ವ್ಯಾಸಂಗದ ನಂತರ ವಕೀಲ ವೃತ್ತಿಯನ್ನು ಪ್ರಾರಂಭಿಸುತ್ತಾರೆ. ಹಾಗೇ ರಾಜಕೀಯದಲ್ಲು ಆಸಕ್ತಿ ಹೊಂದಿದ್ದ ಇವರು ಬಿಜೆಪಿಯ ಸದಸ್ಯರಾಗುತ್ತಾರೆ. ಕಾಶ್ಮೀರ ಜನರ ಪಾಲಿನ ದನಿಯಾಗಿರುತ್ತಾರೆ.
ಇವರು ಕಾಶ್ಮೀರದಲ್ಲಿ ಸಾಕಷ್ಟು ಜನಪ್ರೀಯತೆಯನ್ನು ಪಡೆದಿರುತ್ತಾರೆ. ಇವರನ್ನು 14 ಸೆಪ್ಟೆಂಬರ್ 1989 ರಂದು ವೈಲಿಂಗ್ ವಾಲ್ ಅಥವಾ ಕೋಟ್ಲಿನ್ ಎಂಬಲ್ಲಿ ಜಿಹಾದಿ ಮುಸ್ಲಿಂರು ಗುಂಡಿಕ್ಕಿ ಕೊಲ್ಲುತ್ತಾರೆ. ಇವರು ಜಿಹಾದಿ ಮುಸ್ಲಿಂರ ಗುಂಡಿಗೆ ಬಲಿಯಾದ ಮೊದಲ ಕಾಶ್ಮೀರಿ ಪಂಡಿತ.
ನಂತರ ಬಲಿಯಾದವರು ದಿ. ನಿವೃತ್ತ ನ್ಯಾಯಾದೀಶ ನೀಲಕಂಠ ಗಂಜೂ. ಇವರು 1960ರ ದಶಕದ ಅಂತ್ಯದಲ್ಲಿ, ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾಗಿ ವೃತ್ತಿ ಪ್ರಾರಂಭಿಸುತ್ತಾರೆ. ನಂತರ ಇವರು1966 ರಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಅಮರ್ ಚಂದ್ ಅವರ ಕೊಲೆಯಾಗುತ್ತೆ. ಈ ಕೊಲೆಯಲ್ಲಿ ಭಾಗಿಯಾಗಿದ್ದ, JKLF ಸಂಸ್ಥಾಪಕ ಮಕ್ಬೂಲ್ ಭಟ್ ಗೆ ಆಗಸ್ಟ್ 1968 ರಲ್ಲಿ ಗಂಜೂ ಅವರು ಮರಣದಂಡನೆ ಶಿಕ್ಷೆ ವಿಧಿಸುತ್ತಾರೆ. ನಂತರ ಈ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ 1982ರಲ್ಲಿ ಎತ್ತಿ ಹಿಡಿಯಿತು.
ಸುದೀರ್ಘ ವಿಚಾರಣೆಯ ನಂತರ 1984 ರಲ್ಲಿ ಮರಣದಂಡನೆ ಶಿಕ್ಷೆಯನ್ನು ವಿಧಿಸುತ್ತೆ. ಮಕ್ಬೂಲ್ ಭಟ್ ನ್ನು ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾಗುತ್ತದೆ. ಇದನ್ನು ಸಹಿಸದ ಜಿಹಾದಿ ಮುಸ್ಲಿಂರು ಗಂಜೂ ಅವರ ಮನೆಯ ಮೇಲೆ ಬಾಂಬ್ ದಾಳಿ ನಡೆಸಿದರು. 4 ನವೆಂಬರ್ 1989 ರಂದು, ಮೂರು ಉಗ್ರಗಾಮಿಗಳು ಗಂಜೂ ಅವರು ಅಮೀರ ಕಡಲ್‌ನ ಮಹಾರಾಜ್ ಬಜಾರ್‌ನಲ್ಲಿದ್ದಾಗ, ಜಿಹಾದಿ ಮುಸ್ಲಿಂರು ನ್ಯಾಯಾದೀಶರನ್ನು ಸುತ್ತುವರೆದು ಗುಂಡಿಕ್ಕಿ ಕೊಂದರು.










