ದಿ ಕಾಶ್ಮೀರ ಫೈಲ್ಸ್ ಸಿನಿಮಾ ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆಯನ್ನು ಪಡೆದಿದೆ. ಮಾರ್ಚ್ 12 ರಂದು ರಿಲೀಸ್ ಆಗಿದ್ದ ಸಿನಿಮಾ ಒಳ್ಳೆ ರೆಸ್ಪಾನ್ಸ್ ಪಡೆದುಕೊಳ್ತಿದೆ. ಈ ಸಿನಿಮಾಗೆ ಮಧ್ಯಪ್ರದೇಶದಲ್ಲಿ ತೆರಿಗೆ ಮುಕ್ತಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ. ವಿವೇಕ್ ರಂಜನ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ.
ಅಲ್ಲದೇ ಸಿನಿಮಾದ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ, ಅವರ ಪತ್ನಿ ಮತ್ತು ನಟಿ ಪಲ್ಲವಿ ಜೋಶಿ ಮತ್ತು ಚಿತ್ರದ ನಿರ್ಮಾಪಕ ಅಭಿಷೇಕ್ ಸೇರಿದಂತೆ ಚಿತ್ರದ ತಂಡವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತ್ತು. ಪ್ರಧಾನ ಮಂತ್ರಿಗಳು ಸಿನಿಮಾತಂಡವನ್ನ ಅಭಿನಂದಿಸಿ , ಸಿನಿಮಾವನ್ನ ಶ್ಲಾಘಿಸಿದರು.
ದಿ ಕಾಶ್ಮೀರಿ ಫೈಲ್ಸ್ , ಕಾಶ್ಮೀರದಲ್ಲಿ ನಡೆದ ಹಿಂದೂ ಪಂಡಿತರ ನರಮೇಧದ , ಕ್ರೂರ ಹಾಗೂ ಸತ್ಯಕಥೆಯನ್ನ ದೊಡ್ಡ ಪರದೆಯ ಮೇಲೆ ಬಿಚ್ಚಿಡುತ್ತದೆ. 1990 ರಲ್ಲಿ, ಕಾಶ್ಮೀರಿ ಪಂಡಿತರಿಗೆ ನೀಡಲಾಗಿದ್ದ ಕಿರುಕುಳ , ಚಿತ್ರಹಿಂಸೆ , ಅವರ ತಾಯ್ನಾಡಿನಿಂದ ಬಲವಂತವಾಗಿ ಹೊರಹಾಕಲಾದ , ಹತ್ಯಾಖಾಂಡ , ಅತ್ಯಾಚಾರದ ಕರಾಳ ಇತಿಹಾಸವನ್ನು ಜನಸಾಮಾನ್ಯರಿಗೆ ತೋರಿಸುವ ಪ್ರಯತ್ನವೇ ಈ ಸಿನಿಮಾ.. . ದಿ ಕಾಶ್ಮೀರಿ ಫೈಲ್ಸ್ ಮಾರ್ಚ್ 11 ರಂದು ಬಾಕ್ಸ್ ಆಫೀಸ್‌ನಲ್ಲಿ ಅಸಾಧಾರಣ ಓಪನಿಂಗ್ ಪಡೆದಿದೆ.. ಮತ್ತು ಮೊದಲ ದಿನದಲ್ಲಿ 3.55 ಕೋಟಿ ರೂ. ಗೂ ಹೆಚ್ಚು ಕಲೆಕ್ಷನ್ ಮಾಡಿದೆ. ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ, ಪಲ್ಲವಿ ಜೋಶಿ ಮತ್ತು ಅಭಿಷೇಕ್ ಸೇರಿದಂತೆ ಚಿತ್ರತಂಡ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದೆ.