ಮಧ್ಯಪ್ರದೇಶ ಸರ್ಕಾರ ‘ದಿ ಕಶ್ಮೀರ್ ಫೈಲ್ಸ್’ ಸಿನಿಮಾಗೆ ತೆರಿಗೆ ವಿನಾಯಿತಿ ಘೋಷಣೆ ಮಾಡಿದ ಬೆನ್ನಲ್ಲೇ ಇದೀಗ ಕರ್ನಾಟಕದಲ್ಲೂ ಸಿಎಂ ಬೊಮ್ಮಾಯಿ ಅವರು ಸಿನಿಮಾ ಪ್ರದರ್ಶನಕ್ಕೆ 100 % ತೆರಿಗೆ ವಿನಾಯಿತಿ ಘೋಷಣೆ ಮಾಡಿದ್ದಾರೆ.. ಮಾರ್ಚ್ 13 ರಂದು ಒರಾಯನ್ ಮಾಲ್‌ನಲ್ಲಿ ‘ದಿ ಕಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಿಸಿದ ಸಿಎಂ ಬಸವರಾಜ ಬೊಮ್ಮಾಯಿ ಸಿನಿಮಾಕ್ಕೆ ರಾಜ್ಯದ ಸಿನಿಮಾ ಮಂದಿರಗಳಲ್ಲಿ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ.
ಸಿನಿಮಾ ವೀಕ್ಷಿಸಿದ ಬಳಿಕ ಮಾತನಾಡಿರುವ ಅವರು , ‘ಈ ಸಿನಿಮಾ ನೋಡಿದ ಬಳಿಕ ನನಗೆ ಮಾತನಾಡಲು ಆಗುತ್ತಿಲ್ಲ. ಯಾವ ರೀತಿ ಕಾಶ್ಮೀರದಲ್ಲಿ ಪಂಡಿತರ ಮೇಲೆ ದಾಳಿಯಾಗಿತ್ತು ಎನ್ನುವದನ್ನು ಸಿನಿಮಾದಲ್ಲಿ ತೋರಿಸಿದ್ದಾರೆ. ಅದೆಷ್ಟೋ ಜನ ಉಗ್ರರ ಕೈಲಿ ಸಿಕ್ಕಿ ಪ್ರಾಣವನ್ನ ಬಿಟ್ಟಿದ್ದಾರೆ. ಹೀಗಾಗಿಯೇ ಅಲ್ಲಿ ಆರ್ಟಿಕಲ್ 370 ಅನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ತೆರವುಗೊಳಿಸಿತು. ಇದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ. ಪ್ರತಿಯೊಬ್ಬ ಭಾರತೀಯರು ಈ ಸಿನಿಮಾವನ್ನ ನೋಡಬೇಕು. ಹೀಗಾಗಿ ನಾನು ಸಿನಿಮಾದ ಸಂಪೂರ್ಣ ತೆರಿಗೆ ವಿನಾಯಿತಿ ನೀಡಿ ಅದೇಶ ಮಾಡುತ್ತೇನೆ’ ಎಂದಿದ್ದಾರೆ. ಈ ಸಿನಿಮಾಗೆ ಮಧ್ಯಪ್ರದೇಶಗದ ಹೊರತಾಗಿ , ಗುಜರಾತ್, ಹರಿಯಾಣದಲ್ಲೂ ತೆರಿಗೆ ವಿನಾಯಿತಿ ಘೋಷಿಸಲಾಗಿದೆ.
ದಿ ಕಾಶ್ಮೀರ ಫೈಲ್ಸ್ ಸಿನಿಮಾ ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆಯನ್ನು ಪಡೆದಿದೆ. ಮಾರ್ಚ್ 12 ರಂದು ರಿಲೀಸ್ ಆಗಿದ್ದ ಸಿನಿಮಾ ಒಳ್ಳೆ ರೆಸ್ಪಾನ್ಸ್ ಪಡೆದುಕೊಳ್ತಿದೆ. ದಿ ಕಾಶ್ಮೀರಿ ಫೈಲ್ಸ್ , ಕಾಶ್ಮೀರದಲ್ಲಿ ನಡೆದ ಹಿಂದೂ ಪಂಡಿತರ ನರಮೇಧದ , ಕ್ರೂರ ಹಾಗೂ ಸತ್ಯಕಥೆಯನ್ನ ದೊಡ್ಡ ಪರದೆಯ ಮೇಲೆ ಬಿಚ್ಚಿಡುತ್ತದೆ. 1990 ರಲ್ಲಿ, ಕಾಶ್ಮೀರಿ ಪಂಡಿತರಿಗೆ ನೀಡಲಾಗಿದ್ದ ಕಿರುಕುಳ , ಚಿತ್ರಹಿಂಸೆ , ಅವರ ತಾಯ್ನಾಡಿನಿಂದ ಬಲವಂತವಾಗಿ ಹೊರಹಾಕಲಾದ , ಹತ್ಯಾಖಾಂಡ , ಅತ್ಯಾಚಾರದ ಕರಾಳ ಇತಿಹಾಸವನ್ನು ಜನಸಾಮಾನ್ಯರಿಗೆ ತೋರಿಸುವ ಪ್ರಯತ್ನವೇ ಈ ಸಿನಿಮಾ.. . ದಿ ಕಾಶ್ಮೀರಿ ಫೈಲ್ಸ್ ಮಾರ್ಚ್ 11 ರಂದು ಬಾಕ್ಸ್ ಆಫೀಸ್‌ನಲ್ಲಿ ಅಸಾಧಾರಣ ಓಪನಿಂಗ್ ಪಡೆದಿದೆ.. ಮತ್ತು ಮೊದಲ ದಿನದಲ್ಲಿ 3.55 ಕೋಟಿ ರೂ. ಗೂ ಹೆಚ್ಚು ಕಲೆಕ್ಷನ್ ಮಾಡಿದೆ.









