ಒಟಿಟಿಗೆ ಬರಲಿದೆ ದಿ ಕಾಶ್ಮೀರ್ ಫೈಲ್ಸ್ ಚಿತ್ರ
ದಿ ಕಾಶ್ಮೀರ್ ಫೈಲ್ಸ್ ಕೊರೊನಾ ನಂತರ ತೆರೆಕಂಡ ಚಿತ್ರ ಅಭೂತಪೂರ್ವ ಯಶಸ್ಸು ಕಂಡಿತು. ಕಾರಣ ಚಿತ್ರಕ್ಕೆ ಹೆಣದಿರುವ ನೈಜ ಘಟನೆಯಾಧಾರಿತ ಕಥಾ ಹಂದರ. ಚಿತ್ರದಲ್ಲಿ ಕಾಶ್ಮೀರ ಜನತೆಯ ಹತ್ಯೆ, ಅವರ ವಲಸೆ ಮತ್ತು ಕಾಶ್ಮೀರ ಜನತೆ ಮೇಲೆ ಬೀರಿದ ಕಹಿ ಘಟನೆಗಳನ್ನು ತೋರಿಸಲಾಗಿದೆ. ದಿ ಕಾಶ್ಮೀರ್ ಫೈಲ್ಸ್ ಕಮರ್ಶಿಯಲ್ ಚಿತ್ರವಾಗದಿದ್ದರು, ನೈಜ ಘಟನೆಯಾಧಾರಿತವಾಗಿದ್ದರಿಂದ ಚಿತ್ರವು ಬರಪೂರ ಯಶಸ್ಸು ಕಂಡು, ತನ್ನ ಬೊಕ್ಕಸವನ್ನು ತುಂಬಿಕೊಂಡಿದೆ.
https://www.instagram.com/p/CcfEQXzJ2UZ/?utm_source=ig_embed&ig_rid=37a3b7bd-fedd-41d6-95c1-b13a33985f9d
ವಿವೇಕ ಅಗ್ನಿಹೋತ್ರಿ ನಿರ್ದೇಶಿಸಿರುವ ದಿ ಕಾಶ್ಮೀರ್ ಫೈಲ್ಸ್ ಮೊದಲ ದಿನವೇ 3.5 ಕೋಟಿ ರೂಗಳಿಸಿತು. ಅಂತಿಮವಾಗಿ 251 ಕೋಟಿ ರೂ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಯಿತು. ಇನ್ನೂ ಸಾಕಷ್ಟು ಜನರಿಗೆ ಚಿತ್ರವನ್ನು ಚಿತ್ರಮಂದಿರಲ್ಲಿ ನೋಡಲು ಸಾಧ್ಯವಾಗಲಿಲ್ಲ. ಹೀಗಾಗಿ ಚಿತ್ರತಂಡ ಚಿತ್ರವನ್ನು ಒಟಿಟಿಯಲ್ಲಿ ಬಿಡುಗಡೆಯಲ್ಲಿ ಮುಂದಾಗಿದೆ. ಹೌದು ದಿ ಕಾಶ್ಮೀರ್ ಫೈಲ್ಸ್ ಚಿತ್ರ ಜೀ5 ಮೂಲಕ ವೀಕ್ಷಣೆಗೆ ಲಭ್ಯವಾಗಲಿದೆ.
ವಿಶೇಷವೇನೆಂದರೆ ಈ ಬಾರಿ ಬೇರೆ ಬೇರೆ ಭಾಷೆಗಳಲ್ಲಿ ಡಬ್ ಮಾಡಿ ಒಟಿಟಿಯಲ್ಲಿ ರಿಲೀಸ್ ಮಾಡಲಾಗುತ್ತಿದೆ. ಮೂಲ ಹಿಂದಿಯಲ್ಲಿ ತಯಾರಾದ ಈ ಚಿತ್ರ ಕನ್ನಡ, ತಮಿಳು, ತೆಲಗು ಭಾಷೆಗಳಲ್ಲಿ ಡಬ್ ಆಗಿದೆ. ಇನ್ನೂ ಚಿತ್ರ ಯಾವ ದಿನಾಂಕದಲ್ಲಿ ಒಟಿಟಿ ಪ್ರೀಮಿಯರ್ ಆಗಲಿದೆ ಎಂಬ ಮಾಹಿತಿಯನ್ನು ಜೀ5 ಶೀಘ್ರದಲ್ಲೇ ಹಂಚಿಕೊಳ್ಳಲಿದೆ.








