ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಸೇರಿರುವ ನಟ ದರ್ಶನ್ (Darshan) ಮತ್ತೊಮ್ಮೆ ಮನಯೂಟ ಕೋರಿ ಜೈಲಾಧಿಕಾರಿಗಳು ಹಾಗೂ ಮ್ಯಾಜಿಸ್ಟ್ರೇಟ್ ಗೆ ಮೂರು ಪತ್ರಗಳನ್ನು ಬರೆದಿದ್ದಾರೆ.
ಸ್ವತಃ ಕೈ ಬರಹದ ಮೂಲಕ ಜೈಲಾಧಿಕಾರಿಗೆ, ಜೈಲಿನ ಮಹಾನಿರ್ದೇಶಕರಿಗೆ, ವೈದ್ಯಾಧಿಕಾರಿಗೆ, ಮ್ಯಾಜಿಸ್ಟ್ರೇಟ್ ಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ನನಗೆ ಮೂಳೆ ಶಸ್ತ್ರಚಿಕಿತ್ಸೆಯಾಗಿದೆ, ಪ್ರೋಟಿನ್ ಅವಶ್ಯಕತೆ ಇದೆ. ಕಾರಾಗೃಹಕ್ಕೆ ದಾಖಲಾದ ದಿನದಿಂದ ಜೈಲೂಟ ಸೇವೆನೆ ಮಾಡುತ್ತಿದ್ದೇನೆ. ಇಲ್ಲಿನ ಆಹಾರ ನನ್ನ ಆರೋಗ್ಯ, ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಮನೆ ಊಟ ನೀಡುವಂತೆ ಪತ್ರದ ಮೂಲಕ ದರ್ಶನ್ ಮನವಿ ಮಾಡಿದ್ದಾರೆ.
ಮನೆಯೂಟ ಕೋರಿ ಹೈಕೋರ್ಟ್‌ನಲ್ಲಿ (High Court) ಸಲ್ಲಿಸಿದ್ದ ಸಲ್ಲಿಸಿದ್ದ ಮೆಮೋ ಅರ್ಜಿಯನ್ನು ವಿಚಾರಣೆಗೆ ಬರುತ್ತಿದ್ದಂತೆ ಇತ್ತೀಚೆಗೆ ದರ್ಶನ್ ಪರ ವಕೀಲರು ಹಿಂಪಡೆದಿದ್ದರು. ತಾಂತ್ರಿಕ ಕಾರಣ ನೀಡಿ ದರ್ಶನ್ ಪರ ವಕೀಲರು ಅರ್ಜಿಯನ್ನು ಹಿಂದಕ್ಕೆ ಪಡೆದಿದ್ದರು.
ಇದಕ್ಕೂ ಮುನ್ನ ಮನೆಯೂಟ (Home Food), ಹಾಸಿಗೆ, ಪುಸ್ತಕಗಳಿಗೆ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ (Maagsitrate Court) ಜುಲೈ 25 ರಂದು ವಜಾಗೊಳಿಸಿತ್ತು.
ಕಾನೂನಿಗೆ ಎಲ್ಲರೂ ಒಂದೇ, ಕೈದಿಗಳಲ್ಲಿ ಯಾವುದೇ ಭೇದವಿಲ್ಲ. ಆಸ್ತಿ ಅಂತಸ್ತು ನೋಡಿ ಜೈಲಿನಲ್ಲಿ ಸೌಕರ್ಯ ನೀಡಲು ಸಾಧ್ಯವಿಲ್ಲ. ಅಗತ್ಯವಿದ್ದಾಗ ಮಾತ್ರ ವಿಚಾರಣಾಧೀನ ಕೈದಿಗಳಿಗೆ ಮನೆಯೂಟ ನೀಡಬಹುದು. ಆದರೆ ಕೊಲೆ ಪ್ರಕರಣದ ಆರೋಪಿಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಹೇಳಿ ಕೋರ್ಟ್ ಅರ್ಜಿ ವಜಾಗೊಳಿಸಿತ್ತು.








