ರಷ್ಯಾಕ್ಕಿಂತ ಮೊದಲು ಚೀನಾದಲ್ಲಿ ಸಿದ್ಧವಾಗಿದೆ ಕೋವಿಡ್ ಲಸಿಕೆ
ಬೀಜಿಂಗ್, ಅಗಸ್ಟ್ 13: ರಷ್ಯಾ ಅಭಿವೃದ್ಧಿಪಡಿಸಿರುವ ಸ್ಪುಟ್ನಿಕ್ ವಿ ಕೊರೋನಾ ಲಸಿಕೆ ಪರಿಣಾಮಕಾರಿ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಘೋಷಿಸಿದ್ದಾರೆ. ಆದರೆ ಚೀನಾದಲ್ಲಿ ಅಭಿವೃದ್ಧಿ ಪಡಿಸಿರುವ ಲಸಿಕೆಯನ್ನು ಜೂನ್ ತಿಂಗಳಲ್ಲಿ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯಂತೆ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಗೆ ಕಾಯದೇ ಸೈನಿಕರಿಗೆ ನೀಡಲು ಅನುಮತಿ ನೀಡಲಾಗಿತ್ತು.

ಕ್ಲಿನಿಕಲ್ ಪ್ರಯೋಗಗಳು ಸುರಕ್ಷಿತವೆಂದು ಸಾಬೀತಾದ ನಂತರ ಮತ್ತು ಕೆಲವು ಪರಿಣಾಮಕಾರಿತ್ವವನ್ನು ತೋರಿಸಿದ ನಂತರ ಚೀನಾದ ಮಿಲಿಟರಿ ತನ್ನ ಸಂಶೋಧನಾ ಘಟಕ ಮತ್ತು ಕ್ಯಾನ್ಸಿನೊ ಬಯೋಲಾಜಿಕ್ಸ್ (6185.ಹೆಚ್ಕೆ) ಅಭಿವೃದ್ಧಿಪಡಿಸಿದ ಕೋವಿಡ್ -19 ಲಸಿಕೆಯನ್ನು ಬಳಸಲು ಗ್ರೀನ್ ಸಿಗ್ನಲ್ ಪಡೆದಿತ್ತು.
ಚೀನಾದ ಕೇಂದ್ರ ಮಿಲಿಟರಿ ಆಯೋಗವು ಜೂನ್ 25 ರಂದು ಮಿಲಿಟರಿಯಿಂದ ಲಸಿಕೆ ಬಳಸಲು ಒಂದು ವರ್ಷದ ಅವಧಿಗೆ ಅನುಮೋದನೆ ನೀಡಿದೆ ಎಂದು ಕ್ಯಾನ್ಸಿನೊ ಸಲ್ಲಿಕೆಯೊಂದರಲ್ಲಿ ತಿಳಿಸಿದೆ. ಲಸಿಕೆಯನ್ನು ಕ್ಯಾನ್ಸಿನೊ ಮತ್ತು ಅಕಾಡೆಮಿ ಆಫ್ ಮಿಲಿಟರಿ ಸೈನ್ಸ್ (ಎಎಂಎಸ್) ನಲ್ಲಿ ಸಂಶೋಧನಾ ಸಂಸ್ಥೆ ಜಂಟಿಯಾಗಿ ಅಭಿವೃದ್ಧಿಪಡಿಸಿದೆ. ಇದನ್ನು ಚೀನಾದ ಪೀಪಲ್ಸ್ ಆಫ್ ಲಿಬರೇಷನ್ ಆರ್ಮಿಯ ಸೈನಿಕರಿಗೆ ಮಾತ್ರ ಬಳಕೆ ಮಾಡಲು ಅನುಮತಿ ದೊರಕಿದ್ದು, ಇಲ್ಲಿಯವರೆಗೆ ಎಷ್ಟು ಜನರಿಗೆ ನೀಡಲಾಗಿದೆ ಮತ್ತು ಪರಿಣಾಮಗಳೇನು ಎಂಬ ಬಗ್ಗೆ ಮಾಹಿತಿಗಳು ಲಭ್ಯವಿಲ್ಲ.

ಕೊರೋನವೈರಸ್ ನಿಂದ ಉಂಟಾಗುವ ಉಸಿರಾಟದ ತೊಂದರೆಗೆ ವಿಶ್ವದಲ್ಲಿ ಮಾನವ ಪ್ರಯೋಗಗಳಿಗೆ ಅನುಮೋದನೆ ಪಡೆದ ಚೀನಾದ ಎಂಟು ಲಸಿಕೆಗಳಲ್ಲಿ Ad5-nCoV ಕೂಡ ಒಂದು. ಸೌದಿ ಅರೇಬಿಯಾ ಮತ್ತು ಕೆನಡಾದಲ್ಲಿ ಕೂಡ ಈ ಲಸಿಕೆಯ ಮಾನವ ಪರೀಕ್ಷೆಗೆ ಅನುಮೋದನೆಯನ್ನು ನೀಡಲಾಗಿದೆ.








