ಮಾನವೀಯತೆ ಮುಂದೆ ಯಾವ ಧರ್ಮ – ಜಾತಿಯೂ ಇಲ್ಲ… ನಿಮಗಿದೋ ಅಭಿನಂದನೆ..!
ಕರಿಪ್ಪುರ್ ವಿಮಾನ ದುರಂತದ ವೇಳೆ ಮಲಪ್ಪುರಮ್ ಸ್ಥಳೀಯ ನಿವಾಸಿಗಳು ಮಾಡಿರುವ ರಕ್ಷಣಾ ಕಾರ್ಯವನ್ನು ಶ್ಲಾಘಿಸಲೇಬೇಕು. ಜಡಿ ಮಳೆಯ ನಡುವೆಯೂ ರಕ್ಷಣಾ ಕಾರ್ಯ ತಂಡದೊಂದಿಗೆ ಅಲ್ಲಿನ ಸ್ಥಳಿಯ ನಿವಾಸಿಗಳು ಕೈಜೋಡಿಸಿದ್ದಾರೆ. ದುರಂತದಲ್ಲಿ ಗಾಯಗೊಂಡಿರುವ ಪ್ರಯಾಣಿಕರನ್ನು ತಮ್ಮ ವಾಹನದಲ್ಲೇ ಆಸ್ಪತ್ರೆಗೂ ದಾಖಲಿಸಿದ್ದಾರೆ. ಅಲ್ಲದೆ ಸ್ವಯಂ ಪ್ರೇರಿತರಾಗಿ ರಕ್ತದಾನ ಕೂಡ ಮಾಡಿದ್ದಾರೆ.
ಒಂದು ಕಡೆ ಧಾರಾಕಾರ ಮಳೆ.. ಮತ್ತೊಂದೆಡೆ ಕೋವಿಡ್-19 ಸೋಂಕು ಭಯ. ಇದನ್ನು ಲೆಕ್ಕಿಸದೇ ಜೀವ ಉಳಿಸಲು
ಮಲ್ಲಪ್ಪುರಂ ನಿವಾಸಿಗಳು ಮಾಡಿರುವ ಸೇವಾ ಕಾರ್ಯ ಮಾನವೀಯತೆಗೆ ಹಿಡಿದ ಕೈಗನ್ನಡಿಯಾಗಿದೆ. ಇನ್ನು ದುಬೈನಿಂದ ವಿಮಾನದಲ್ಲಿ ಆಗಮಿಸಿರುವಂತ ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ ಕ್ವಾರಂಟೈನ್‍ನಲ್ಲಿರಬೇಕಾಗಿತ್ತು. ಈ ನಡುವೆ ದುರಂತದಲ್ಲಿ ಸಾವನ್ನಪ್ಪಿದ್ದ ಮೂರು ನಾಲ್ಕು ಪ್ರಯಾಣಿಕರ ಮೃತ ದೇಹದಲ್ಲಿ ಕೊರೋನಾ ಸೋಂಕು ಕೂಡ ಪತ್ತೆಯಾಗಿದೆ.
ಇದೀಗ ರಕ್ಷಣಾ ಕಾರ್ಯತಂಡದೊಂದಿಗೆ ಸಹಾಯ ಮಾಡಿರುವ ಸ್ಥಳೀಯ ನಿವಾಸಿಗಳು ಸ್ವಯಂ ಪ್ರೇರಿತವಾಗಿ ಒಂದು ವಾರಗಳ ಕಾಲ ಕ್ವಾರಂಟೈನ್‍ಗೆ ಒಳಪಟ್ಟಿದ್ದಾರೆ. ಇದೀಗ ನಿಸ್ವಾರ್ಥ ಸೇವೆ ಮಾಡಿರುವ ಮಲ್ಲಪ್ಪುರಂ ನಿವಾಸಿಗಳಿಗೆ ಕೇರಳ ಪೊಲೀಸ್ ಕೃತಜ್ಞತೆ ಸಲ್ಲಿಸಿದೆ. ಅಲ್ಲದೆ ಕ್ವಾರಂಟೈನ್ ಕೇಂದ್ರಕ್ಕೆ ಹೋಗಿ ಸೆಲ್ಯೂಟ್ ಹೊಡೆಯುವ ಮೂಲಕ ಗೌರವ ಸಲ್ಲಿಸಿದೆ. ಜಾತಿ -ಧರ್ಮ ಯಾವುದಾದ್ರೂ ಏನು.. ಅಂತಿಮವಾಗಿ ಉಳಿದಿರುವುದು ಮನುಜ ಧರ್ಮವೊಂದೇ…
ಫೋಟೋ ಮತ್ತು ಮಾಹಿತಿ ಕೃಪೆ
ಗಣೇಶ್ ಭಟ್ ಬಾಯರ್








