ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್ – 2 ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ಸಂಜಯ್ ದತ್ ನಟನೆಯ ‘ಅಧೀರ’ನ ಲುಕ್ ಇಂದು ರಿವೀಲ್ ಆಗಿದೆ.
ಇಂದು ಸಂಜಯ್ ದತ್ ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಕೆಜಿಎಫ್ -2 ಚಿತ್ರತಂಡ ನಿರ್ಭಿತ ಅಧೀರನ ಪೋಸ್ಟರ್ ಬಿಡುಗಡೆ ಮಾಡಿದೆ.ಇದರ ಜೊತೆಗೆ ಕ್ರೂರತನಗಳಿಂದ ಪ್ರಭಾವಿತನಾದ ನಿರ್ಭಿತ ಯೋಧ ಎಂದು ಹೊಂಬಾಳೆ ಫಿಲಂಸ್ ಟ್ವೀಟ್ ಮಾಡಿದೆ.
https://twitter.com/hombalefilms/status/1288330779957723137?s=20
ಪೋಸ್ಟರ್ ನಲ್ಲಿ.. ಸಂಜಯ್ ದತ್ ಅಧೀರನಾಗಿ ಕೈಯಲ್ಲಿ ಕತ್ತಿ ಹಿಡಿದು ಏನೋ ಯೋಚಿಸೋ ರೀತಿಯಲ್ಲಿ ಕುಳಿತಿದ್ದಾನೆ. ಸದ್ಯ ಈ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿಗಳಲ್ಲಿ ಧಗಧಗಿಸುತ್ತಿದೆ.








