ವಾಷಿಂಗ್ಟನ್: ಅಮೆರಿಕದ (America) ಮೈನೆಯಲ್ಲಿ (Maine) ಬುಧವಾರ ಗುಂಡಿನ ದಾಳಿ ನಡೆಸಿ 18 ಜನರ ಸಾವಿಗೆ ಕಾರಣವಾಗಿದ್ದ ಶೂಟರ್ (Shooter) 2 ದಿನಗಳ ನಂತರ ಸ್ವಯಂ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ ಎಂದು ವರದಿ ತಿಳಿಸಿವೆ.
ಈಶಾನ್ಯ ರಾಜ್ಯವಾದ ಮೈನೆಯಲ್ಲಿನ ಈ ಹಾರ್ಡ್-ಸ್ಕ್ರಬಲ್ ನಗರದಲ್ಲಿನ ಬೌಲಿಂಗ್ ಅಲ್ಲೆ ಮತ್ತು ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ರಾಬರ್ಟ್ ಕಾರ್ಡ್ ಮನಬಂದಂತೆ ಗುಂಡಿನ ದಾಳಿ ನಡೆಸಿ, 18 ಜನರ ಹತ್ಯೆ ಮಾಡಿದ್ದ. ಅಲ್ಲದೇ, ಘಟನೆಯಲ್ಲಿ 13 ಜನ ಗಾಯಗೊಂಡಿದ್ದರು. ರಾಬರ್ಟ್ ಕಾರ್ಡ್ (Robert Card) (40) ಮೃತ ಶೂಟರ್ ಎಂದು ಗುರುತಿಸಲಾಗಿದೆ.
2 ದಿನಗಳಿಂದ ಪೊಲೀಸರು ಆರೋಪಿ ರಾಬರ್ಟ್ ಪತ್ತೆಗಾಗಿ ತೀವ್ರ ಶೋಧ ನಡೆಸಿದ್ದರು. ಆದರೆ, ಆತನ ಮೃತದೇಹ ಲೆವಿಸ್ಟನ್ ನಗರದ ಹತ್ತಿರದಲ್ಲಿ ಇದ್ದ ದೂರದ ಕಾಡಿನಲ್ಲಿ ಪತ್ತೆಯಾಗಿದೆ ಎಂದು ಮೈನೆ ಸಾರ್ವಜನಿಕ ಸುರಕ್ಷತಾ ಆಯುಕ್ತ ಮೈಕ್ ಸೌಶುಕ್ ಹೇಳಿದ್ದಾರೆ.
ರಾಬರ್ಟ್ ಸೇನಾ ಮೀಸಲು ಪಡೆಯಲ್ಲಿ ಬಂದೂಕು ತರಬೇತುದಾರನಾಗಿದ್ದ ಎನ್ನಲಾಗಿದೆ.








