ಬೆಂಗಳೂರು: ಪಾದರಾಯನಪುರದಲ್ಲಿ ನಡೆದ ಗಲಾಟೆ ಸಂಬಂಧ ಪೊಲೀಸರು ಓರ್ವ ಮಹಿಳೆ ಸೇರಿ ಈವರೆಗೆ 54 ಜನರನ್ನ ಬಂಧಿಸಿದ್ದಾರೆ. ಈ ಮಧ್ಯೆ ನಿನ್ನೆಯ ಗಲಾಟೆ ಹಿಂದೆ ಗಾಂಜಾ ಲೇಡಿ ಫಿರೋಜಾಳ ಕೈವಾಡ ಇದೆಯಾ ಎಂಬ ಅನುಮಾನಗಳು ಮೂಡಿವೆ. ಏಕಾಏಕಿ ನೂರಾರ ಜನರ ಗುಂಪಿನಲ್ಲಿ ಮಹಿಳೆಯೊಬ್ಬಳು ಕಾಣಿಸಿಕೊಂಡಿದ್ದಳು. ಮಹಿಳೆ ಸೀಲ್ ಡೌನ್ ಮಾಡಿದ್ದ ಮಾರ್ಗಗಳನ್ನು ಧ್ವಂಸಗೊಳಿಸುತ್ತಿರುವ ದೃಶ್ಯಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಫಿರೋಜಾ ಗಾಂಜಾ ದಂಧೆ ನಡೆಸುತ್ತಿದ್ದು, ಈಕೆಯೇ ಮುಂದೆ ನಿಂತು ಶೀಟ್ ಗಳನ್ನು ಕೀಳಿಸಿದ್ದಾಳೆ. ಗಾಂಜಾ ಪುಂಡರನ್ನು ಒಂದೆಡೆ ಸೇರಿಸಿ ಈಕೆಯೇ ಗಲಾಟೆಗೆ ಪ್ರಚೋದನೆ ನೀಡಿದಳಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಹೀಗಾಗಿ ಕಿಂಗ್ ಪಿನ್ ಫರೋಜಾಳನ್ನ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಫರೋಜಾ ನೀಡಿದ ಸೂಚನೆ, ಕೆಲವ್ರು ದಂಗೆ ಏಳಲು ಕಾರಣವಾಯ್ತು ಎಂದು ಹೇಳಲಾಗಿದೆ. ಈ ಹಿನ್ನೆಲೆ ಪಶ್ಚಿಮ ವಿಭಾಗದ ಡಿಸಿಪಿ ಹಾದೂ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ಖುದ್ದು ಆಕೆಯನ್ನ ವಿಚಾರಣೆ ನಡೆಸುತ್ತಿದ್ದಾರೆ.
ಬಂಧಿತ ಫರೋಜಾ ಏರಿಯಾದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಳೆಂಬ ಆರೋಪವೂ ಇದೆ. ಒಂದಷ್ಟು ಹುಡುಗರನ್ನ ದಂಗೆ ಎಬ್ಬಸಿ, ಆಕೆಯೂ ಪೊಲೀಸರ ಬ್ಯಾರಿಕೇಡ್ ಎಳೆದು ರಂಪಾಟ ಮಾಡಿದ್ದಾಳೆ. ರಂಪಾಟದ ವೇಳೆ ದಂಗೆ ಏಳಿ ಎಂದಿದ್ದ ವಿಡಿಯೋ ಲಭ್ಯವಾಗಿದೆ. ಈ ಹಿನ್ನೆಲೆ ಸದ್ಯ ಫರೋಜಾಳನ್ನ ಹೆಡೆಮುರಿ ಕಟ್ಟಿರೋ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.