ರಾಜಕೀಯ ಚದುರಂಗದ ಅಧಿಪತಿ..ಶೋಷಿತ ವರ್ಗದ ಧ್ವನಿಗೆ ಪ್ರತಿಧ್ವನಿ.. ಜನ ಮೆಚ್ಚಿದ ಮಹಾನಾಯಕ ಸಿಎಂ ಸಿದ್ದರಾಮಯ್ಯ
——————

ಗುಡಿಯೊಳಗಿನ ದೇವರಿಗಿಂತ ಹೊರಗಿನ ಹಸಿದ ಮನಷ್ಯನಲ್ಲಿ ದೇವರನ್ನು ಕಾಣು ಎಂಬುದು ಜಗದ್ಗುರು ಶ್ರೀ ಬಸವಣ್ಣನವರ ಬೋಧನೆ. 12ನೇ ಶತಮಾನದಲ್ಲಿ ಸಮಾನತೆಯ ಸಿದ್ಧಾಂತವನ್ನು ಸಾರಿದ್ಧ ಮಾನವತಾವಾದಿ ಬಸವಣ್ಣನವರಿಂದ ಪ್ರೇರಣೆಗೊಂಡ ಸಿದ್ದರಾಮೇಶ್ವರ ಎಂಬ ಕಾಯಕಯೋಗಿ.
ಯೋಗ ಎಂಬುದು ಭೋಗವಲ್ಲ. ತ್ಯಾಗವಯ್ಯ ಎಂದು ಜನ ಸೇವೆ ಎಂದು ಸಮಾಜವನ್ನು ಜಾಗೃತಗೊಳಿಸಿದ್ದರು. ಅಲ್ಲದೆ ಮಂತ್ರ ಜಪವನ್ನು ಮಾಡುವುದನ್ನು ಬಿಟ್ಟು ಜನರ ಸಂಕಷ್ಟಗಳಿಗೆ ಸ್ಪಂದಿಸುವ ದಾಸೋಹ ಸಂಸ್ಕøತಿಯನ್ನು ಪಸರಿಸಿದ್ರು. ಇಂದಿಗೂ ಮಠ, ದೇಗುಲಗಳಲ್ಲಿ ದಾಸೋಹದ ಮೂಲಕ ಹಸಿದವರ ಹೊಟ್ಟೆ ತುಂಬಿಸುವ ಸೇವೆ ನಡೆಯುತ್ತಿದೆ.
ಅದೇ ರೀತಿ ನಮ್ಮ ಹೆಮ್ಮೆಯ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡ ಹಾಗೇನೇ..! ಬಸವಣ್ಣ, ಸಿದ್ದರಾಮೇಶ್ವರರಂತಹ ಕಾಯಕಯೋಗಿಗಳ ವಿಚಾರಧಾರೆಗಳನ್ನು ಅಳವಡಿಸಿಕೊಂಡು, ಬಡವರ, ಶೋಷಿತ ವರ್ಗಗಳ ಧ್ವನಿಯಾಗಿ ಸಾಮಾಜಿಕ ಸುಧಾರಣೆಯಲ್ಲಿ ಮಹತ್ತರವಾದ ಬದಲಾವಣೆ ತಂದ ಧೀಮಂತ ನಾಯಕ.
ಅಷ್ಟೇ ಅಲ್ಲ, ಸಮಸಮಾಜದ ಕನಸನ್ನು ನನಸಾಗುವಂತೆ ಮಾಡಿದ ಸಮಾನತೆಯ ಹರಿಕಾರ. ಆರ್ಥಿಕತೆ ಮತ್ತು ಆಡಳಿತದಲ್ಲಿ ಚತುರ. ನೇರ ನಡೆ ನುಡಿಯಲ್ಲಿ ದಿಟ್ಟ ನಿರ್ಧಾರ. ಬಡವರ ಪಾಲಿನ ಆಪ್ತಮಿತ್ರ. ಸಮಾಜದ ಏಳಿಗೆಗೆ ಇವರ ದೂರದೃಷ್ಟಿಯ ಯೋಜನೆಗಳೇ ಆಧಾರ. ವ್ಯಕ್ತಿತ್ವದಲ್ಲೂ ಗಂಭೀರ. ನುಡಿದಂತೆ ನಡೆದ ಆಡಳಿತಗಾರ. ಹಿತಶತ್ರುಗಳ ಒಳರಾಜಕೀಯವನ್ನು ಮೆಟ್ಟಿ ನಿಂತ ಮಗಧೀರ. ರಾಷ್ಟ್ರ ಹಾಗೂ ರಾಜ್ಯ ರಾಜಕೀಯದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ್ದ ಮಹಾಶೂರ. ಅನ್ನಭಾಗ್ಯ, ಗ್ಯಾರಂಟಿ ಯೋಜನೆಗಳ ಮೂಲಕ ಜನ ಸಾಮಾನ್ಯರ ಕಣ್ಣೀರು ಒರೆಸಿದ ಮಹಾವೀರ.ರಾಜಕೀಯ ಹಾಗೂ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ರೂ ಎಂದೆಂದಿಗೂ ತನ್ನ ಸಿದ್ದಾಂತಗಳು ಮಾತ್ರ ಜನಪರ. ವಿರೋಧಿಗಳಿಗೂ ಅಚ್ಚುಮೆಚ್ಚಿನ ಮಿತ್ರ. ನಂಬಿದವರನ್ನು ಕೈಬಿಡದ ಆತ್ಮೀಯ ಸಹೋದರ.ಅನ್ಯಾಯದ ವಿರುದ್ಧ ಹಿಂದೆ ಮುಂದೆ ನೋಡದೇ ತೊಡೆ ತಟ್ಟಿ ಮುನ್ನುಗ್ಗುವ ಹೋರಾಟಗಾರ. ಅಂದುಕೊಂಡಿದ್ದನ್ನು ಸಾಧಿಸುವ ಛಲಗಾರ.ಸರ್ಕಾರದ ಪ್ರತಿ ಯೋಜನೆಗಳು ಜನಸಾಮಾನ್ಯರಿಗೆ ಸಿಗುವಂತೆ ಮಾಡಿರುವ ಮೋಡಿಗಾರ. ಬುದ್ದಿವಂತಿಕೆ, ಚಾಣಕ್ಯ ನೀತಿಯಿಂದಲೇ ಸಂಘರ್ಷ, ಸಮಸ್ಯೆಗಳನ್ನು ಬಗೆಹರಿಸುವ ಜಾದುಗಾರ. ಬದ್ಧವೈರಿಗಳನ್ನು ಮಾತು ಮತ್ತು ಕಾಯಕದಿಂದಲೇ ಬಗ್ಗುಬಡಿಯುವ ಹಠಗಾರ. ಪ್ರತಿಯೊಂದು ವಿಷಯದ ಬಗ್ಗೆಯೂ ಆಳವಾದ ಅಧ್ಯಯನ ನಡೆಸಿ ಮಾತನಾಡುವ ಅದ್ಭುತ ಮಾತುಗಾರ. ಆಧುನಿಕತೆಗೆ ತಕ್ಕಂತೆ ಜನಪರ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತಂದಿರುವ ಕನಸುಗಾರ. ಜನಪದ, ಸಾಹಿತ್ಯ, ಕಲೆ, ಸಿನಿಮಾ, ಸಂಸ್ಕøತಿಯನ್ನು ಪ್ರೀತಿಸುವ ಅಪ್ಪಟ ಕಲೆಗಾರ.ನೆಲ.
.ಜಲ..ಭಾಷೆ ವಿಚಾರದಲ್ಲಿ ನಾಡನ್ನು ಕಾಯುವ ನಿಜವಾದ ಕಾವಲುಗಾರ… ದೀನ ದಲಿತರÀ, ಅನ್ನದಾತರ, ಅಹಿಂದ ವರ್ಗಗಳ ಹಿತವನ್ನು ಕಾಪಾಡುವ ಸರದಾರ.

ಒಂದೇ ಮಾತಿನಲ್ಲಿ ಹೇಳುವುದಾದ್ರೆ ಬಯಸದೇ ಬಂದ ಅಧಿಕಾರ. ಅದೃಷ್ಟ, ಅವಕಾಶವನ್ನು ಜನ ಸೇವೆಯ ಮೂಲಕ ಬಡವ – ಬಲ್ಲಿದರ ನಡುವಿನ ಸೇತುವೆಯಾಗಿ ರಾಜ್ಯವನ್ನು ಸುಭ್ರದ್ರವಾಗಿ ಮುನ್ನಡೆಸುತ್ತಿರುವ ಸಿದ್ದರಾಮಯ್ಯನವರ ಕೊಡುಗೆ ಈ ನಾಡಿಗೆ ಅಪಾರ. ಇದು ನಮ್ಮ ನೆಲ್ಮೆಯ ಮುಖ್ಯಮಂತ್ರಿ ಮೈಸೂರು ಜಿಲ್ಲೆಯ ಸಿದ್ದರಾಮನಹುಂಡಿಯ ಸಿದ್ಧರಾಮಯ್ಯನವರ ವ್ಯಕ್ತಿತ್ವ… ಹಿರಿಮೆ..ಗರಿಮೆ..!
ಹೌದು, ಸಿದ್ದರಾಮಯ್ಯ ಅಂದ್ರೆ ಅದು ವನ್ ಒನ್ಲಿ ಸಿದ್ದರಾಮಯ್ಯ ಅಷ್ಟೇ.. ಆನೆ ನಡೆದದ್ದೇ ದಾರಿ ಅಂತರಲ್ಲ ಹಾಗೇ. ಸಿದ್ದರಾಮಯ್ಯನವರು ನಡೆದು ಬಂದ ಹಾದಿಯೇ ಅಂತಹುದ್ದು. ತೀರಾ ಸಾಮಾನ್ಯ ಕುಟುಂಬದಿಂದ ಬಂದಿರುವ ಸಿದ್ದರಾಮಯ್ಯನವರು ವಕೀಲರಾಗಿ, ಶಾಸಕರಾಗಿ, ಸಚಿವರಾಗಿ, ಉಪಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕನಾಗಿ, ದಾಖಲೆಯ 16ನೇ ಬಾರಿ ಹಣಕಾಸು ಮಂತ್ರಿಯಾಗಿ, ಒಂದಲ್ಲ, ಎರಡು ಬಾರಿ ಅದೂ ಕೂಡ ಕರ್ನಾಟಕದ ಸುದೀರ್ಘ ಅವಧಿಯ ಮುಖ್ಯಮಂತ್ರಿಯಾಗಿ ರಾಜ್ಯಾಡಳಿತ ನಡೆಸಿರುವುದು ಅಪ್ರತಿಮ ಸಾಹಸಗಾಥೆ.
ಜನನಾಯಕನಾಗಿ, ಸಚಿವರಾಗಿ, ಆರ್ಥಿಕ ಮಂತ್ರಿಯಾಗಿ ಮಾಡಿರುವ ಜನಪರ ಕಲ್ಯಾಣ ಯೋಜನೆಗಳು ಹಲವಾರು. ಎರಡು ಬಾರಿ ಮುಖ್ಯಮಂತ್ರಿಯಾಗಿ ರಾಜ್ಯದ ಜನತೆಗೆ ಕೊಟ್ಟಿರುವ ಕೊಡುಗೆಗಳು ಹೆಜ್ಜೆ ಗುರುತುಗಳಾಗಿವೆ. ಇನ್ನು ವಿರೋಧ ಪಕ್ಷದ ನಾಯಕನಾಗಿ ಮಾಡಿರುವಂತಹ ಹೋರಾಟಗಳು, ಪಾದಯಾತ್ರೆಗಳು, ಅನ್ಯಾಯ, ಭ್ರಷ್ಟಚಾರದ ವಿರುದ್ದ ಮೊಳಗಿಸಿದ ಘರ್ಜನೆ ವಿರೋಧ ಪಕ್ಷಗಳನ್ನು ತಲ್ಲಣಗೊಳಿಸಿರುವುದಂತೂ ಸುಳ್ಳಲ್ಲ. ಹಾಗಾಗಿಯೇ ನಾಡಿನ ಹೆಮ್ಮೆಯ ದೊರೆ ಎಂಬ ಬಿರುದನ್ನು ಪಡೆದುಕೊಂಡಿರುವ ಸಿದ್ದರಾಮಯ್ಯನವರು ಭಾಗ್ಯಗಳ ವಿಧಾತ ಎಂದೇ ಖ್ಯಾತಿ ಪಡೆದಿದ್ದಾರೆ.
ಅಂದ ಹಾಗೇ ಸಿಎಂ ಸಿದ್ದರಾಮಯ್ಯನವರು ರಾಜ್ಯದ ಕೀಡೆ, ಕ್ರೀಡಾಪಟುಗಳಿಗೂ ಪ್ರೋತ್ಸಾಹವನ್ನು ನೀಡುತ್ತಾ ಬಂದಿದ್ದಾರೆ. ರಾಷ್ಟ್ರ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಗೆದ್ದ ಕ್ರೀಡಾಪಟುಗಳಿಗೆ ನಗದು ಬಹುಮಾನ ನೀಡುತ್ತಿದ್ದಾರೆ. ಅಲ್ಲದೆ ಬಜೆಟ್ನಲ್ಲೂ ಪ್ರತ್ಯೇಕ ಅನುದಾನಗಳನ್ನು ನೀಡಿರುವುದರಿಂದ ರಾಜ್ಯದ ಹಲವಾರು ಕ್ರೀಡಾಂಗಣಗಳು ಹೊಸ ಸ್ವರೂಪವನ್ನು ಪಡೆದುಕೊಂಡಿವೆ. ಈಗಾಗಲೇ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದವರಿಗೆ ಆರು ಕೋಟಿ ನಗದು ಬಹುಮಾನ ಹಾಗೂ ಪ್ರೋತ್ಸಾಹ ಧನ ನೀಡುವುದಾಗಿ ಹೇಳಿದ್ದಾರೆ. ಅಲ್ಲದೆ, ಹಲವಾರು ಕ್ರೀಡಾಪಟುಗಳಿಗೆ ಸಿಎಂ ಸಿದ್ದರಾಮಯ್ಯನವರು ವೈಯಕ್ತಿಕವಾಗಿಯೂ ಸಹಾಯಧನವನ್ನು ನೀಡಿದ್ದಾರೆ.
ಇದೀಗ 9 ಡ್ರೀಮ್ಸ್ ಸಂಸ್ಥೆಯ ವಿನೂತನ ಪರಿಕಲ್ಪನೆಯ ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿಗೂ ಸಿಎಂ ಸಿದ್ದರಾಮಯ್ಯ ಶುಭ ಹಾರೈಸಿದ್ದಾರೆ. ಟೂರ್ನಿಯ ಲಾಂಛನವನ್ನು ಕೂಡ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅನಾವರಣಗೊಳಿಸಿದ್ದಾರೆ.
ಒಟ್ಟಿನಲ್ಲಿ ದೂರದೃಷ್ಟಿಯ ನಾಯಕ, ಅಸಮಾನತೆ ವಿರುದ್ಧ ಧ್ವನಿ ಎತ್ತುವ ಸಾಮಾಜಿಕ ಸುಧಾರಕ. ಮೂಢನಂಬಿಕೆ, ಮೌಢ್ಯಗಳ ವಿರುದ್ಧ ನಿಷ್ಠುರವಾಗಿ ಮಾತನಾಡುವ ಚಿಂತಕ.. ಯುವ ರಾಜಕಾರಣಿಗಳಿಗೆ, ಜನ ನಾಯಕರಿಗೆ, ಜನ ಸೇವಕರಿಗೆ ಸ್ಫೂರ್ತಿಯ ಮಾರ್ಗದರ್ಶಕ. ಜನ ಸಾಮಾನ್ಯರ ಆಶಾಕಿರಣ ಸಿದ್ದರಾಮಯ್ಯನವರು ಈ ನಾಡಿನ ಮಹಾನಾಯಕ..!








