ಕರ್ನಾಟಕದ ಬಸ್ ಮೇಲೆ MES ಶಿವಸೇನೆ ಪುಂಡಾಟ…..
MES ಭಂಡರ ಪುಂಡಾಟ ಇನ್ನೂ ನಿಲ್ಲುತ್ತಿಲ್ಲ. ಮುಂಬೈನಿಂದ ಕಲಬುರಗಿಗೆ ಬರ್ತಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಯ ಸರ್ಕಾರಿ ಬಸ್ ಎಂ ಇ ಎಸ್ ಪುಂಡರು ದಾಳಿ ಮಾಡಿದ್ದಾರೆ. ಬಸ್ ಮೇಲೆ ಜೈ ಶಿವಾಜಿ ಎಂದು ಬರೆದ ಪುಂಡರು ಡ್ರೈವರ್ ಬಳಿ ಬಳಿ ಬಲವಂತವಾಗಿ ಜೈ ಶಿವಾಜಿ ಎಂದು ಹೇಳಿಸಿದ್ದಾರೆ.
ಸಾರಿಗೆ ಬಸ್ ಗಳ ಮೇಲೆ ಜೈ ಶಿವಾಜಿ ಎಂದು ಬಣ್ಣದಲ್ಲಿ ಬರೆದಿದ್ದು ಅಲ್ಲದೇ, ಎಂಇಎಸ್ ಧ್ವಜಗಳನ್ನು ಬಸ್ ಮುಂದೆ ಕಟ್ಟಿದ್ದಾರೆ. ಈ ಎಲ್ಲಾ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಮೊನ್ನೆ ಸಹ ಮಹಾರಾಷ್ಟ್ರದಿಂದ ಬರುತ್ತಿದ್ದ ಬಸ್ ಮೇಲೆ ಇಂತದೇ ಕೃತ್ಯವನ್ನ ನಡೆಸಿದ್ದರು. ನಿನ್ನೆಯಷ್ಟೇ ಎಂಇಎಸ್ ಪುಂಡರ ವಿರುದ್ಧ ಗೂಂಡಾ ಕಾಯ್ದೆ ಹಾಗೂ ದೇಶದ್ರೋಹ ಪ್ರಕರಣ ದಾಖಲಿಸುವಂತ ನಿರ್ಣಯಕ್ಕೆ, ವಿಧಾನಸಭೆ ಒಕ್ಕೊರಲಿನಿಂದ ಅಂಗೀಕರಿಸಲಾಗಿತ್ತು.








