ಕೊರೊನಾ ಹೊಡೆತಕ್ಕೆ ಎಷ್ಟೋ ಮದುವೆಗಳು ಮುಂದಕ್ಕೆ ಹೋಗಿವೆ. ಇನ್ನೊಂದಿಷ್ಟು ಮದುವೆಗಳು ಕುಟುಂಬಸ್ಥರ ಉಪಸ್ಥಿತಿಯಲ್ಲೇ ಮುಗಿದು ಹೋಗಿವೆ. ಇದರ ಮಧ್ಯೆ ಕೊರೊನಾ ವೈರಸ್ ಸೋಂಕು ಜೀವನವನ್ನೇ ಅಸ್ತವ್ಯಸ್ತ ಮಾಡಿದ್ದು, ಇದೀಗ ಮದುವೆಯಲ್ಲಿನ ಸಂಪ್ರದಾಯಗಳನ್ನು ಬದಲಾಯಿಸುತ್ತಿದೆ. ಇಷ್ಟು ದಿನ ಮದುಮಕ್ಕಳು ಮೊದಲಿಗೆ ಒಬ್ಬರಿಗೊಬ್ಬರು ಹಾರ ಹಾಕುವ ಶಾಸ್ತ್ರವನ್ನ ಮಾಡುತ್ತಿದ್ದರು. ಆದ್ರೆ ಈಗ ಹೆಮ್ಮಾರಿ ಕೊರೊನಾ ವೈರಸ್ ಹೊಡೆತಕ್ಕೆ ಜೋಡಿಯೊಂದು ಹಾರದ ಬದಲು ಮಾಸ್ಕ್ ಗಳನ್ನ ಬದಲಿಸಿಕೊಂಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.
Wow.. wermaala ki jagaah mask pehnaai ki rasam.. pic.twitter.com/eOheHHupMo
— Arif Aajakia (@arifaajakia) June 4, 2020
ವಿಡಿಯೋದಲ್ಲಿ ಏನಿದೆ?
ವಿಡಿಯೋದಲ್ಲಿ ವರ ವಧುವಿಗೆ ಮಾಸ್ಕ್ ಹಾಕುತ್ತಿದ್ದು, ಅಲ್ಲಿದ್ದವರೆಲ್ಲಾ ಚಪ್ಪಾಳೆ ತಟ್ಟಿದ್ದಾರೆ. ಈ ಸಮಯದಲ್ಲಿ ಮಹಿಳೆಯೊಬ್ಬಳು ವೈರಸ್ ನೋ ಮೋರ್ ಎಂದು ಹೇಳಿರೋದನ್ನ ನಾವು ಕೇಳಬಹುದಾಗಿದೆ. ಈ ವಿಡಿಯೋ ವೈರಲ್ ಆಗ್ತಿದ್ದಂತೆ ನೆಟ್ಟಿಗರು ಹೊಸ ಸಂಪ್ರದಾಯ ಮಾಸ್ಕ್ ಹಾಕೋ ಶಾಸ್ತ್ರ, ಈಗ ನಾದಿನಿಯರು ಮದುಮಗನ ಚಪ್ಪಲಿ ಕದಿಯೋಲ್ಲ, ಮಾಸ್ಕ್ ಕದಿಯುತ್ತಾರೆ. ಕುಂಕುಮದ ಬದಲು ಸ್ಯಾನಿಟೈಜರ್ ಹಚ್ಚಿ. ಪುರೋಹಿತರೇ ವರ ಮತ್ತು ವಧುವಿಗೆ ಪರಸ್ಪರ ಮಾಸ್ಕ್ ಹಾಕಿಸಿ ಮದುವೆಯ ಶಾಸ್ತ್ರವನ್ನ ಪೂರ್ಣಗೊಳಿಸಿ ಎಂದು ಕಮೆಂಟ್ ಮಾಡುತ್ತಿದ್ದಾರೆ.








