ಆಕಾಶದಲ್ಲಿ ಮುಂದಿನ 20 ದಿನಗಳ ಕಾಲ ಗೋಚರಿಸಲಿದೆ ನಿಯೋವೈಸ್ ಧೂಮಕೇತು
ಮಂಗಳೂರು, ಜುಲೈ 14: ಇಂದಿನಿಂದ ಮುಂದಿನ 20 ದಿನಗಳ ಕಾಲ ಭಾರತದ ಖಗೋಳಾಸಕ್ತರಿಗೆ ನಿಯೋವೈಸ್ ಧೂಮಕೇತುವನ್ನು ಕಣ್ತುಂಬಿಕೊಳ್ಳುವ ಅವಕಾಶ. 20 ದಿನಗಳ ಕಾಲ ಈ ಅದ್ಭುತ ಆಕಾಶಕಾಯವನ್ನು ಬರಿಗಣ್ಣಿನಿಂದ ವೀಕ್ಷಿಸಲು ಸಾಧ್ಯವಿದೆ. ಇಂದಿನಿಂದ (ಜುಲೈ 14) ರಿಂದ ಆಗಸದ ವಾಯವ್ಯ ಭಾಗದಲ್ಲಿ ಮುಂದಿನ 20 ದಿನಗಳವರೆಗೆ ನಿಯೋವೈಸ್ ಧೂಮಕೇತು ಕಾಣಿಸಿಕೊಳ್ಳಲಿದ್ದು, ಸೂರ್ಯಾಸ್ತದ ಬಳಿಕ ಇದು ಬರಿಕಣ್ಣಿಗೆ ಸುಮಾರು 20 ನಿಮಿಷಗಳ ಕಾಲ ಗೋಚರಿಸಲಿದೆ.

ನಿಯೋವೈಸ್ ಧೂಮಕೇತು ಭೂಮಿಯಿಂದ 20 ಕೋಟಿ ಕಿ.ಮೀ ದೂರದಲ್ಲಿ ಪರಿಭ್ರಮಿಸುತ್ತಿದ್ದು, ಜುಲೈ 22ರಂದು ಭೂಮಿಯ ಸನಿಹಕ್ಕೆ ಬರಲಿದ್ದು. ಆಗ ಇನ್ನಷ್ಟು ಸ್ಪಷ್ಟವಾಗಿ ಗೋಚರಿಸುತ್ತದೆ. ಜುಲೈ ತಿಂಗಳು ಕೊನೆಯಾಗುತ್ತಿದ್ದಂತೆ, ಧೂಮಕೇತು ಕಣ್ಮರೆಯಾಗಿ ಬಳಿಕ ಬರಿಗಣ್ಣಿಗೆ ಕಾಣಸಿಗುವುದಿಲ್ಲ. ಮುಂದೆ ಈ ಧೂಮಕೇತುವನ್ನು ಬರಿಗಣ್ಣಿನಲ್ಲಿ ವೀಕ್ಷಿಸಲು 6,800 ವರ್ಷಗಳ ಕಾಲ ಕಾಯಬೇಕು.








